‘ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗುವಷ್ಟು ದಡ್ಡರಲ್ಲ’-ರೇವಣ್ಣ16-05-2018

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸಕ್ಸಸ್ ಆಗಲೆಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ದೇವರ ಮೊರೆ ಹೋಗಿದ್ದಾರೆ. ಬೆಳಿಗ್ಗೆಯೇ ಹೋಮ ಹವನ ಮಾಡುವ ಮೂಲಕ ಪೂಜೆ ಸಲ್ಲಿಸಿದ್ದಾರೆ. ಪೂಜೆಯಲ್ಲಿ ಹೆಚ್.ಡಿ ರೇವಣ್ಣ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ರೇವಣ್ಣ. 'ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗುವಷ್ಟು ದಡ್ಡರಲ್ಲ, ಯಾವುದೇ ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗಲ್ಲ, ದೇವೇಗೌಡ, ಕುಮಾರಸ್ವಾಮಿಯವರ ಜೊತೆಗೆ ಇರುತ್ತಾರೆ' ಎಂದು ಹೇಳಿದರು. 'ನಾವೇ ಸರಕಾರ ರಚನೆ ಮಾಡಲಿದ್ದೇವೆ' ಎಲ್ಲ ಒಳ್ಳೆಯದಾಗಲಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda H.D.Revanna ಪೂಜೆ ಕಾಂಗ್ರೆಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ