ಹೆಚ್ಡಿಕೆ ನೇತೃತ್ವದಲ್ಲಿ ಜೆಡಿಎಸ್ ಶಾಸಕಾಂಗ ಸಭೆ

HDK meeting with JDS MLAs

16-05-2018

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಗರದ ಖಾಸಗಿ ಹೊಟೇಲ್ ನಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆಯಲಿದೆ. ಸಭೆ ಹಿನ್ನೆಲೆ ಹೊಟೇಲ್ ಗೆ ಜೆಡಿಎಸ್ ಶಾಸಕರು ಆಗಮಿಸುತ್ತಿದ್ದಾರೆ. ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ, ಎಮ್.ಎಲ್.ಸಿ ಚೌಡರೆಡ್ಡಿ ತೂಪಲ್ಲಿ ಈಗಾಗಲೆ ಆಗಮಿಸಿದ್ದಾರೆ. ಕೆಲವು ಶಾಸಕರು ಹೊಟೇಲ್ ನಲ್ಲಿ ರಾತ್ರಿಯೇ ಬಂದು ತಂಗಿದ್ದಾರೆ. ಎಂ.ಎಲ್.ಸಿ ನಾರಾಯಣಸ್ವಾಮಿ, ನಾಗಮಂಗಲ ಶಾಸಕ ಸುರೇಶ್ ಗೌಡ, ಎಂಎಲ್ಸಿ ಕಾಂತರಾಜು, ಮಾಜಿ ಶಾಸಕ ಕೋನರೆಡ್ಡಿ, ಜಯಣ್ಣ ಜೊತೆಗೆ ಹಿರಿಯೂರಿನ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಿವಪ್ರಸಾದ್ ಕೂಡ ಆಗಮಿಸಿದ್ದಾರೆ. ಸಭೆಯಲ್ಲಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.


ಸಂಬಂಧಿತ ಟ್ಯಾಗ್ಗಳು

HD kumaraswamy Meeting ರಾಜಕೀಯ ಶಾಸಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ