‘ಕಾಂಗ್ರೆಸ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ’- ಬೊಮ್ಮಾಯಿ

BJP leader Basavaraj Bommai met yeddyurappa

16-05-2018

ಬೆಂಗಳೂರು: ರಾಜ್ಯ ವಿಧಾನಭೆಯ ಚುನಾವಣಾ ಫಲಿತಾಂಶ ಅತಂತ್ರ ಹಿನ್ನೆಲೆ ನಿನ್ನೆಯಿಂದ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಇಂದು ಬೆಳಿಗ್ಗೆ ಬಿಎಸ್ಎಸ್ ವೈ ಮನೆಗೆ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಭೇಟಿ ನಂತರ ಮಾತನಾಡಿದ ಅವರು, ಜನಾಭಿಪ್ರಾಯ, ಜನಮತ ಬಿಜೆಪಿಗೆ ಸರ್ಕಾರ ರಚಿಸಬೇಕೆಂದು ಅಧಿಕಾರ ನೀಡಿವೆ. ಗೋವಾ ರಾಜ್ಯ ಸರ್ಕಾರ ರಚನೆಯ ವಿಷಯವನ್ನ ಪ್ರಸ್ಥಾಪಿಸಿದ ಬೊಮ್ಮಾಯಿ, ಸರ್ಕಾರ ರಚನೆ ರಾಜ್ಯ ರಾಜ್ಯಪಾಲರ ವಿವೇಚನೆಗೆ ಬಿಟ್ಟದ್ದು ಎಂದಿದ್ದಾರೆ. ಕಾಂಗ್ರೆಸ್ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ದೂರಿದ್ದಾರೆ. ಇದುವರೆಗೂ ಬೇರೆ ಪಕ್ಷದ ಯಾವ ಶಾಸಕರನ್ನು ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

Assembely Result ಬಸವರಾಜ ಬೊಮ್ಮಾಯಿ ರಾಜ್ಯಪಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ