‘ರಾಜ್ಯಪಾಲರ ತೀರ್ಮಾನದ ನಂತರ ಮುಂದಿನ ನಿರ್ಧಾರ’15-05-2018

ಬೆಂಗಳೂರು: ಜೆಡಿಎಸ್ ಗೆ ಬೆಂಬಲ ಘೋಷಿಸಿ ತಾವು ಮಾನ್ಯ ರಾಜ್ಯಪಾಲರಿಗೆ ಪತ್ರವನ್ನು ಬರೆದಿದ್ದು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಗೂ ತಿಳಿಸಿದ್ದೇವೆ, ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೇವೆ ಅವರಿಗೆ ಪತ್ರಗಳನ್ನ ಕೊಟ್ಟಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ. ರಾಜ್ಯಪಾಲರ ತೀರ್ಮಾನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು, ಸಂಪೂರ್ಣವಾಗಿ ಸರ್ಕಾರ ರಚನೆ ಮಾಡಲು ಬೆಂಬಲ ನೀಡಿದ್ದೇವೆ ಎಂದರು.

ಇದೇ ವೇಳೆ ಸಿದ್ದರಾಮಯ್ಯ ಮಾತನಾಡಿ, ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದೇವೆ. ಜೆಡಿಎಸ್ ಕಾಂಗ್ರೆಸ್ ಜೊತೆ ಸರ್ಕಾರ ರಚಿಸಲಿದೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲು ತೀರ್ಮಾನಿಸಿದೆ. ಈಗ ನಮ್ಮ ತೀರ್ಮಾನವನ್ನ ರಾಜ್ಯಪಾಲರಿಗೆ ಪತ್ರದ ಮೂಲಕ ತಿಳಿಸಿದ್ದೇವೆ. ದೇವೇಗೌಡರಿಗೂ ಪತ್ರದ ಮೂಲಕ ತಿಳಿಸಿದ್ದೇವೆ. ನಮ್ಮ ಪಕ್ಷದಿಂದ ನಾನು, ಪರಮೇಶ್ವರ್, ಡಿಕೆಶಿ, ಅಶೋಕ್ ಗೆಹ್ಲೋಟ್, ಗುಲಾಂ ನಬಿ ಅಜಾದ್ ಭೇಟಿಯಾಗಿ, ಜೆಡಿಎಸ್ ಬೆಂಬಲಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಜೆಡಿಎಸ್ ಒಪ್ಪಿಗೆ ಸೂಚಿಸಿದ್ದು, ಕುಮಾರಸ್ವಾಮಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಮ್ಯಾಜಿಕ್ ನಂಬರ್ 113 ಬೇಕಿದೆ, ಅದಕ್ಕಿಂತ ಹೆಚ್ಚಿನ ಸೀಟು ನಮ್ಮ ಬಳಿ ಇದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಸೇರಿ ಹೆಚ್ಚಿನ ಸೀಟುಗಳು ನಮ್ಮಲ್ಲಿದೆ ಎಂದರು.

ನಂತರದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ 'ನಮ್ಮ ಪಕ್ಷದಿಂದ ಕಾಂಗ್ರೆಸ್ ಬೆಂಬಲದಿಂದ ಸರ್ಕಾರ ರಚಿಸೋದಾಗಿ ರಾಜ್ಯಪಾಲರಿಗೆ ಪತ್ರ ನೀಡಿದ್ದೇವೆ', ಯಾವ್ಯಾವ ಪಕ್ಷದಿಂದ ಎಷ್ಟು ಸಂಖ್ಯಾಬಲ ಬರಲಿದೆ ಅನ್ನೋದನ್ನು ನೋಡಿ ಕರೆಯುತ್ತೇನೆಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D kumaraswamy siddaramaiah ಪರಮೇಶ್ವರ್ ರಾಜ್ಯಪಾಲ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಸನ್ಮಾನ್ಯ ಕುಮಾರ್ ಸ್ವಾಮಿಯವರು ಅವರ ೨೦ ತಿಂಗಳ ಅವಧಿಯಲ್ಲಿ ,ಉತ್ತಮ ಆಡಳಿತ ನೀಡಿದ್ದರು,ಈಗ ಇನ್ನೂ ಉತ್ತಮ, ಜಾತ್ಯತೀತ ಆಡಳಿತವನ್ನು ನೀಡಲಿ ಎಂಬುದು ನನ್ನ ಬಯಕೆ. ದೇವರು ಅವರಿಗೆ ಆರೋಗ್ಯ ನೀಡಲಿ. ವಂದನೆಗಳು.
  • ವಿಜಯ ಕುಮಾರ್
  • ನಿವೃತ್ತಿ ನೌಕರ.