ಲಂಡನ್ ನಲ್ಲಿ ಭಾರಿ ಸ್ಪೋಟ ಉಗ್ರರ ದುಷ್ಕೃತ್ಯ ?

Kannada News

23-05-2017

ಲಂಡನ್ :- ಲಂಡನ್ ನಲ್ಲಿ ಕಳೆದ ಮಧ್ಯರಾತ್ರಿ ಭಾರಿ ಸ್ಪೋಟ ಸಂಭವಿಸಿದೆ. ಉತ್ತರ ಲಂಡನ್ ನ ಮ್ಯಾನ್ ಚೆಸ್ಟರ್ ನಲ್ಲಿ ಈ ಸ್ಪೋಟ ಸಂಭವಿಸಿದ್ದು, ಸ್ಪೋಟದಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಹಾಗೂ 50 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಲಂಡನ್ ನ ಮ್ಯಾನ್ ಚೆಸ್ಟರ್ ಪೊಲೀಸರು ತಿಳಿಸಿದ್ದಾರೆ. ಪ್ರಸಿದ್ಧ ಗಾಯಕಿ ಅರಿಯಾನ ಗ್ರಾಂಡೆ ಅವರ ಸಂಗೀತ ಮೇಳ ನಡೆಯುವಾಗಲೇ  ಈ ಕೃತ್ಯ ನಡೆದಿದ್ದು ಭಾರಿ ಆಘಾತ ಮೂಡಿಸಿದೆ. ಆದರೆ ಘಟನೆಯಲ್ಲಿ ಗಾಯಕಿಗೆ ಯಾವುದೇ ಹಾನಿಯಾಗಿಲ್ಲ. ಸ್ಪೋಟವು ಉಗ್ರರ ದುಷ್ಕೃತ್ಯವಿರಬಹುದೆಂದು ಶಂಕಿಸಲಾಗಿದ್ದು, ಘಟನೆಗೆ ಯಾವುದೇ ನಿಖರವಾದ ಕಾರಣಗಳು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಖಂಡಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರು,ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ