ಕಾಂಗ್ರೆಸ್-ಜೆಡಿಸ್ ಪಕ್ಷಗಳ ತೆರೆಮರೆ ಕಸರತ್ತು

rapid developments in karnataka politics!

15-05-2018

ಬೆಂಗಳೂರು: ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷ ಬಹುಮತ ಪಡೆಯದ ಹಿನ್ನೆಲೆ, ಬಿಜೆಪಿ-ಕಾಂಗ್ರೆಸ್-ಜೆಡಿಸ್ ಪಕ್ಷಗಳ ತೆರೆಮರೆಯ ಕಸರತ್ತು ನಡೆಸಿವೆ. ಈ ಕುರಿತು ಸಿಎಂ‌ ಅಧಿಕೃತ ನಿವಾಸ ಕಾವೇರಿ ಬಳಿ ಜಂಟಿ ಸುದ್ದಿಗೋಷ್ಟಿ ನಡೆಸಿದ ಸಿಎಂ‌ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಪ್ರಾಥಮಿಕವಾಗಿ ಯಾವುದೇ ರೀತಿ ಬೇಡಿಕೆ ಇಟ್ಟಿಲ್ಲ, ನಾವು ಜೆಡಿಎಸ್ ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಪರಮೇಶ್ವರ್ ಹೇಳಿಕೆ ನೀಡಿದ್ದು, ಜನರು ಕೊಟ್ಟ ತೀರ್ಪಿಗೆ ನಾವು ತಲೆ ಬಾಗಿದ್ದೇವೆ. ಜನರು ಕೊಟ್ಟ ತೀರ್ಪು ನಾನು ಒಪ್ಪಿಕೊಂಡಿದ್ದೇವೆ ಎಂದರು.

ಸರ್ಕಾರ ರಚನೆ ಮಾಡಲು ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಜೆಡಿಎಸ್ ಗೆ ನಮ್ಮ ಬೆಂಬಲ ಕೊಡಲು ತೀರ್ಮಾನಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬಂದಿದೆ. ಜನಾದೇಶವನ್ನ ನಾವು ಒಪ್ಪಿ ಕೊಂಡಿದ್ದೇವೆ. ದೇವೇಗೌಡರು ಹಾಗು ಕುಮಾರಸ್ವಾಮಿ ಜೊತೆ ಈಗಾಗಲೇ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

 

 


ಸಂಬಂಧಿತ ಟ್ಯಾಗ್ಗಳು

Hung assembly karnataka ಅಧಿಕೃತ ತೀರ್ಪು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ