ಬೆಂಗಳೂರು ಗ್ರಾಮಾಂತರ: ಜೆಡಿಎಸ್ 2, ಕಾಂಗ್ರೆಸ್ 2 ಗೆಲುವು

Bengalurru Rural: JDS 2, Congress 2 won

15-05-2018

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಎರಡರಲ್ಲಿ ಗೆಲುವು ಸಾಧಿಸಿದ್ದು, ಮತ್ತೆರೆಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.

1. ಹೊಸಕೋಟೆ: ಕ್ಷೇತ್ರದಲ್ಲಿ ಕಾಂಗ್ರೆಸ್ ನ ಎಂ.ಟಿ.ಬಿ.ನಾಗರಾಜ್, ಬಿಜೆಪಿಯ ಅಭ್ಯರ್ಥಿ ಶರತ್ ಬಚ್ಚೇಗೌಡ, ಮತ್ತು ಜೆಡಿಎಸ್ ನ ಕೃಷ್ಣಮೂರ್ತಿ ವಿರುದ್ಧ ಸ್ಪರ್ಥಿಸಿ ವಿಜಯ ಸಾಧಿಸಿದ್ದಾರೆ.

2. ದೊಡ್ಡಬಳ್ಳಾಪುರ: ಕಾಂಗ್ರೆಸ್ ನ ಟಿ.ವೆಂಕಟರಮಣಯ್ಯಗೆ 9945 ಮತಗಳ ಅಂತರದಲ್ಲಿ ಗೆಲುವು ದಕ್ಕಿದೆ. ಬಿಜೆಪಿಯಿಂದ ಜೆ.ನರಸಿಂಹಸ್ವಾಮಿ ಸ್ಪರ್ಧಿಸಿದ್ದು, ಜೆಡಿಎಸ್ ನಿಂದ ಮುನೇಗೌಡ ಅಖಾಕ್ಕಿಳಿದಿದ್ದರು.

3. ನೆಲಮಂಗಲ: ಜೆಡಿಎಸ್ ನ ಡಾ.ಶ್ರೀನಿವಾಸ ಮೂರ್ತಿ 22,830 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಬಿಜೆಪಿಯ ಎಂ.ವಿ ನಾಗರಾಜು, ಕಾಂಗ್ರೆಸ್ ನ ನಾರಾಯಣ ಸ್ವಾಮಿ ಕಣದಲ್ಲಿದ್ದರು.

4. ದೇವನಹಳ್ಳಿ: ಜೆಡಿಎಸ್ ನ ನಿಸರ್ಗ ನಾರಾಯಣ ಸ್ವಾಮಿ 16,905 ಮತಗಳ ಅಂತರದಿಂದ ಗೆದ್ದಿದ್ದಾರೆ. ನಿಸರ್ಗ ನಾರಾಯಣ ಸ್ವಾಮಿ, ಕಾಂಗ್ರೆಸ್ ನ ಕೆ.ವೆಂಕಟಸ್ವಾಮಿ, ಬಿಜೆಪಿಯ ಕೆ.ನಾಗೇಶ್ ವಿರುದ್ಧ ಸ್ಪರ್ಧಿಸಿದ್ದರು.


ಸಂಬಂಧಿತ ಟ್ಯಾಗ್ಗಳು

JDS Congress ಕ್ಷೇತ್ರ ಶರತ್ ಬಚ್ಚೇಗೌಡ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ