ಮನೆಗೆ ನುಗ್ಗಿ ಕಳ್ಳತನ

Mobile, laptop theft at jalahall: evidence in cc camera

14-05-2018

ಬೆಂಗಳೂರು: ಮನೆಯ ಚಿಲಕ ಹಾಕದೇ ಮಲಗಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಯೊಬ್ಬ ಲ್ಯಾಪ್ ಟಾಪ್ ಮೊಬೈಲ್ ಇನ್ನಿತರ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಜಾಲಹಳ್ಳಿಯಲ್ಲಿ ನಡೆದಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಜಫ್ರೆನ್ ಹುಸೇನ್ ಅವರು ನಿನ್ನೆ ಭಾನುವಾರ ತಡರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದಾರೆ. ಆಗ ಅವರು ತಮ್ಮ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಟೇಬಲ್ ಮೇಲೆ ಇಟ್ಟು ಮಲಗಿದ್ದಾರೆ.

ಬೆಳಿಗ್ಗೆ ಜಫ್ರೆನ್ ಹುಸೇನ್ ಎದ್ದು ನೋಡಿದಾಗ ಲ್ಯಾಪ್ ಟಾಪ್ ಬ್ಯಾಗ್ ಮತ್ತು ಮೊಬೈಲ್ ಫೋನ್ ಸ್ಥಳದಲ್ಲಿ ಇರಲಿಲ್ಲ. ರಾತ್ರಿ ಟೇಬಲ್ ನಲ್ಲಿದ್ದ ವಸ್ತುಗಳು ಎಲ್ಲಿಗೆ ಹೋಯಿತು ಎಂದು ವಿಚಾರಿಸಿದ್ದಾರೆ.

ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಿಸಿಟಿವಿಯಲ್ಲಿ ಸರೆಯಾದ ದೃಶ್ಯಗಳನ್ನು ನೋಡಿದಾಗ ಬೆಳಗಿನ ಜಾವ ಯುವಕನೊಬ್ಬ ಮನೆಗೆ ನುಗ್ಗಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ಕದ್ದು ಪರಾರಿಯಾಗಿರುವುದು ಕಂಡುಬಂದಿದೆ ಈ ಸಂಬಂಧ ಜಫ್ರೆನ್ ಹುಸೇನ್ ಈಗ ಜಾಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

theft laptop ಕಂಪೆನಿ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ