ಜೋರಾಗ್ತಿದೆ ಚುನಾವಣಾ ಬೆಟ್ಟಿಂಗ್ ಅಬ್ಬರ!

Election Result: Heavy Betting at mandya!

14-05-2018

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಬೆಟ್ಟಿಂಗ್ ಅಬ್ಬರ ಜೋರಾಗಿದೆ. ಐಪಿಎಲ್ ಅನ್ನು ಮೀರಿಸುತ್ತಿದೆ ಸಕ್ಕರೆ ನಾಡಿನ ಚುನಾವಣಾ ಬೆಟ್ಟಿಂಗ್ ವ್ಯವಹಾರ. ಲಕ್ಷ ಲಕ್ಷದ ವರೆಗೂ ಚುನಾವಣೆಯಲ್ಲಿ ವಿನ್ನಿಂಗ್ ಕ್ಯಾಂಡಿಡೇಟ್ ಪರ ಬೆಟ್ಟಿಂಗ್ ಹೂಡಿಕೆ ಮಾಡಲಾಗುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಬೆಟ್ಟಿಂಗ್‌ ಗಾಗಿ ಹಣ ಹಿಡಿದು ನಡು ರಸ್ತೆಯಲ್ಲಿ ಎದುರಾಳಿಗಾಗಿ ಜೆಡಿಎಸ್ ಕಾರ್ಯಕರ್ತ ಕಾಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರೀರಂಗಪಟ್ಟಣ ಕ್ಷೇತ್ರದ ಬಾಬುರಾಯನಕೊಪ್ಪಲು ಬಳಿ ವ್ಯಕ್ತಿಯೊಬ್ಬ ಐದು ನೂರು ರೂಪಾಯಿಯ ನೋಟ್‌ಗಳ ಕಂತೆ ಹಿಡಿದು ಮಾತನಾಡುತ್ತಿದ್ದು, ಈತ ಜೆಡಿಎಸ್ ಪರ ಹಣ ಹೂಡಿಕೆ ಮಾಡಲು ಬಂದಿದ್ದ ಎನ್ನಲಾಗಿದೆ. ಆದರೆ ಎದುರಾಳಿಗಳು ಯಾರೂ ಬರದ ಹಿನ್ನಲೆಯಲ್ಲಿ ಕೋಪಗೊಂಡು ಬೈದುಕೊಂಡು ಹೋಗೋ ವಿಡಿಯೋ ವೈರಲ್ ಆಗಿದೆ‌. ಇದರ ಜೊತೆಗೆ ಹಣ, ಆಸ್ತಿ, ವಾಹನಗಳು, ಸಾಕು ಪ್ರಾಣಿಗಳು ಪಣಕ್ಕೆ ಇಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಮೇಲುಕೋಟೆ, ಶ್ರೀರಂಗಪಟ್ಟಣ, ನಾಗಮಂಗಲ ಕ್ಷೇತ್ರದಲ್ಲೇ ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದ್ದು, ಜೆಡಿಎಸ್ ಗೆ ಸೆಡ್ಡು ಹೊಡೆದ ಬಂಡಾಯ ಶಾಸಕರ ಪರ ವಿರುದ್ಧ ಹೆಚ್ಚಿನ ಬೆಟ್ಟಿಂಗ್ ಹೂಡಿಕೆ ನಡೆಯುತ್ತಿದೆ ಎನ್ನಲಾಗಿದೆ.


ಸಂಬಂಧಿತ ಟ್ಯಾಗ್ಗಳು

IPL Election ಬೆಟ್ಟಿಂಗ್ ಹೂಡಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ