‘ಸೋಲಿನ ಭೀತಿಯಿಂದ ದಲಿತ ಸಿಎಂ ಕೂಗನ್ನು ಎಬ್ಬಿಸಿದ್ದಾರೆ’

If they have concerned about the dalits, they could have give chance to dalit cm last two years ago?-srinivas prasad

14-05-2018

ಮೈಸೂರು: ಅಧಿಕಾರದ ದುರಾಸೆಯಿಂದ ಸಿದ್ದರಾಮಯ್ಯ ಮತ್ತೊಮ್ಮೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ ಹೊರತು ಫಲಯಾನಕ್ಕೆ ಹೆದರಿ ಅಲ್ಲ ಎಂದು, ಮೈಸೂರಿನಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ. ಸಿದ್ದರಾಮಯ್ಯಗೆ ಸೋಲಿನ ಭೀತಿ ಎದುರಾಗಿದೆ, ಅದಕ್ಕೆ ಈಗ ದಲಿತ ಸಿಎಂ ಕೂಗನ್ನ ಎಬ್ಬಿಸಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದ್ದಿದ್ದರೆ ಕಳೆದ ಎರಡೂವರೆ ವರ್ಷದ ಹಿಂದೆಯೇ ದಲಿತ ಸಿಎಂ ಮಾಡಬಹುದಿತ್ತು? ಬಹುಮತ ಬರಲ್ಲ ಎಂದು ಜಾರಿಕೊಳ್ಳಲು ದಲಿತ ಸಿಎಂ ಪ್ರಸ್ತಾಪ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ಒಂದು ವೇಳೆ ಅತಂತ್ರ ಪರಿಸ್ಥಿತಿ ಎದುರಾದರೆ ಜೆಡಿಎಸ್ ಮುಖ್ಯ ಪಾತ್ರ ವಹಿಸುತ್ತದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯಾವ ರೀತಿ ತಿರ್ಮಾನ ಮಾಡುತ್ತಾರೆ ನೋಡಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಬಲಾಢ್ಯ ವಾಗಿರುವುದು ಗೊತ್ತಿದ್ದರೂ ಅಲ್ಲಿ ಸ್ಪರ್ಧೆ ಮಾಡಿರೋದು ಸೋಲಿಗೆ ಕಾರಣವಾಗ್ತಿದೆ.

ರಾಜ್ಯದಲ್ಲಿ ದಾಖಲೆ ಪ್ರಮಾಣದ ಮತದಾನವಾಗಿರುವುದು ಬದಲಾವಣೆಯ ಮುನ್ಸೂಚನೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತೇವೆ ಎಂದರು.

 


ಸಂಬಂಧಿತ ಟ್ಯಾಗ್ಗಳು

Dalit siddaramaiah ಉಪ ಮುಖ್ಯಮಂತ್ರಿ ದಾಖಲೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ