ಮೊಬೈಲ್, ಪರ್ಸ್ ಕಳ್ಳರಿಗೆ ಸಖತ್ ಗೂಸಾ

Mobile, purse thieves red handedly caught and beaten

14-05-2018

ಬೆಂಗಳೂರು: ಕೆಂಗೇರಿ ಬಳಿ ಪ್ರಯಾಣಿಕರ ಮೊಬೈಲ್, ಪರ್ಸ್ ದೋಚುತ್ತಿದ್ದ ಇಬ್ಬರನ್ನು ಹಿಡಿದ ಪ್ರಯಾಣಿಕರು ಧರ್ಮದೇಟು ನೀಡಿ ಸಿಟಿ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಕಳ್ಳತನ ಮಾಡಿ ಕಳ್ಳರು ಪರಾರಿಯಾಗಲು ಯತ್ನಿಸಿದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಪ್ರಯಾಣಿಕರು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.

ಕಳ್ಳರು ಸುಮಾರು 30 ವರ್ಷ ವಯಸ್ಸಿನವರಾಗಿದ್ದು ಅವರನ್ನು ವಶಕ್ಕೆ ತೆಗೆದುಕೊಂಡು ರೈಲ್ವೆ ಪೊಲೀಸರು ವಿಚಾರಣೆ ನಡೆಸಿದ್ದಾರೆ ಆರೋಪಿಗಳು ರೈಲ್ವೆ ನಿಲ್ದಾಣ ಮತ್ತು ರೈಲುಗಳಲ್ಲಿ ಮೊಬೈಲ್, ಪರ್ಸ್, ಬ್ಯಾಗ್ ಗಳನ್ನು ಕದಿಯುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಸಂಬಂಧಿತ ಟ್ಯಾಗ್ಗಳು

Mobile Purse ಕಳ್ಳರು ರೆಡ್ ಹ್ಯಾಂಡ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ