ಸಿದ್ದರಾಮಯ್ಯಗೆ ಎಚ್.ವಿಶ್ವನಾಥ್ ತಿರುಗೇಟು

Cm siddaramaiah v/s H. Vishwanath

14-05-2018

ಮೈಸೂರು: ಚುನಾವಣಾ ಪಾವಿತ್ರ್ಯತೆ ಹಾಳು ಮಾಡಿದ್ದೇ ಸಿಎಂ ಸಿದ್ದರಾಮಯ್ಯ ಸಾಧನೆ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಎಚ್.ವಿಶ್ವನಾಥ್ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸ್ವಾರ್ಥ ಮತ್ತು ಅಧಿಕಾರದ ದುರಾಸೆಗಾಗಿ ಚುನಾವಣೆ ಪಾವಿತ್ರ್ಯತೆ ಹಾಳು ಮಾಡಿದರು. ಸಿಎಂ ಅಧಿಕಾರ ತ್ಯಜಿಸುವುದೇನೋ ನಿಜ. ಆದರೆ, ಅವರು ರಾಜ್ಯಕ್ಕೆ ಏನು ತಾನೇ ಬಿಟ್ಟು ಹೋಗುತ್ತಿದ್ದಾರೆ? ಮುಂದಿನ ಪೀಳಿಗೆಗಾಗಿ ಏನು ತಾನೇ ಉಳಿಸಿದ್ದಾರೆ? ಸಿಎಂ ಸ್ಥಾನಕ್ಕಾಗಿ ಇಡೀ ರಾಜ್ಯವನ್ನು ಹಾಳು ಮಾಡುವುದು ಸರಿಯೇ ಎಂದಿದ್ದಾರೆ.

ಚಾಮುಂಡೇಶ್ವರಿಯಲ್ಲಿ ಸಿಎಂ ಗೆಲ್ಲಲ್ಲ, ಇದನ್ನ ಸಾಮಾನ್ಯ ಜನ ಹೇಳುತ್ತಿದ್ದಾರೆ. ಸಮೀಕ್ಷೆಗಳೆಲ್ಲಾ ನಿಜವಲ್ಲ. ಸ್ಪಷ್ಟವಾಗಿರದ ಮಾಹಿತಿ ಸಮೀಕ್ಷೆಯಲ್ಲ. ಮತದಾನ ಪ್ರಮಾಣ ಏರಿಕೆಯಾಗಿರುವುದು ಒಳ್ಳೆಯ ಬೆಳವಣಿಗೆ, ಪ್ರತಿಯೊಬ್ಬರು ಮತದಾನ ಮಾಡಬೇಕೆಂಬುದು ಅಂಬೇಡ್ಕರ್​ ಅವರ ಆಶಯ. ಚಕ್ರವರ್ತಿಗೂ, ಸಾಮಾನ್ಯನಿಗೂ ಒಂದೇ ಓಟು ಅಂತಾ ಮಾಡಿದ್ದೇಕೆ, ಮತದಾನ ಪ್ರಮಾಣ ಹೆಚ್ಚಾಗುವುದು ಬದಲಾವಣೆಯ ಲಕ್ಷಣ, ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ ಎಂದರ್ಥ ಎಂದರು.

ದಲಿತ ಸಿಎಂ ವಿಚಾರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್  ಸಿಎಂ‌ ಸ್ಥಾನ ದಾನ ಮಾಡುವವರಂತೆ ಹೇಳಬಾರದು, ಸಿಎಂ ಸ್ಥಾನ ಯಾರ ಮನೆ ಸ್ವತ್ತಲ್ಲ. ಸಿಎಂ‌ ಸ್ಥಾನ‌ ಪಡೆಯುವುದು ಸಾಂವಿಧಾನಿಕ ಹಕ್ಕು ಎಂದು ತಿರುಗೇಟು ನೀಡಿದ್ದಾರೆ.

 

 

 


ಸಂಬಂಧಿತ ಟ್ಯಾಗ್ಗಳು

H. Vishwanath Chamundeshwari ಪಾವಿತ್ರ್ಯತೆ ಅಧಿಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ