ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ !

Kannada News

23-05-2017 263

ಗದಗ:- ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಬಿಎಸ್ ವೈ ಅರವ ಗದಗ ಜಿಲ್ಲಾ ಬರ ಪ್ರವಾಸ ಆರಂಭಕ್ಕೂ ಮುನ್ನ  ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಅವರು, 1 ಲಕ್ಷ 80 ಸಾವಿರ ಕೋಟಿ ಬಜೆಟ್ ಮಂಡನೆ ಮಾಡಿರುವ  ಸರ್ಕಾರ 4 ವರ್ಷಗಳಲ್ಲಿ 92 ಸಾವಿರ ಕೋಟಿ ಸಾಲ ಮಾಡಿದೆ. ಕೇಂದ್ರದಿಂದ ಕೋಟ್ಯಾಂತರ ರೂಪಾಯಿ ಸಹಾಯ ಧನ ಬಂದಿದೆ. ಆದರು ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು. ಬರಗಾಲದಲ್ಲಿಯೂ ಜನರಿಗೆ ಸ್ಪಂದಿಸದ ರೈತ ವಿರೋಧಿ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಅನುರಾಗ್ ತಿವಾರಿ ಸಾವಿನ ನಂತರ ಯಾವ ಇಲಾಖೆಯಲ್ಲಿ ಯಾವ ಅವ್ಯವಹಾರ ಇದೆ ಎಂದು ಬಯಲಾಗುತ್ತಿದೆ. ಛತ್ತೀಸ್ ಘಡ್ ದಿಂದ ಬರುವ ಅಕ್ಕಿಯನ್ನು ಗೋಡಾನ್ ಸೇರುವ ಮೊದಲೇ ಮಾರಲಾಗಿದೆ. ಇದನ್ನು ಬಯಲಿಗೆಳೆಯಲಾಗುತ್ತದೆ ಎಂದೇ ತಿವಾರಿಯವರ ಅನುಮಾಸ್ಪದ ಸಾವಾಗಿದೆ ಎಂದು ಅವರು ಆರೋಪಿಸಿದರು.
 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ