ಹಲವೆಡೆ ಆಲಿಕಲ್ಲು ಮಳೆ: ಬೆಳೆ ನಾಶ

Heavy hailstone rain: crop Destroyed

14-05-2018

ಬೆಂಗಳೂರು: ಚಿಕ್ಕಬಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹಲವೆಡೆ ನಿನ್ನೆ ರಾತ್ರಿ  ಆಲಿಕಲ್ಲು ಮಳೆ ಸುರಿದು ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ನಾಶವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ರೈತರಾದ ಕೆ.ಕೆ.ವೆಂಕಟೇಶ್, ರಂಗಪ್ಪ, ಮಧುಸೂದನರೆಡ್ಡಿ, ಕೃಷ್ಣಾರೆಡ್ಡಿ, ಮುರಳಿ, ವೇಣುಗೋಪಾಲ, ಬಾಸ್ಕರ ಹಾಗೂ ಮತ್ತಿತರೆ ಕೃಷಿ ರೈತರ 150 ಎಕರೆಗೂ ಹೆಚ್ಚು ವಿಸ್ತೀರ್ಣದ ಜಮೀನನಲ್ಲಿ ಬೆಳೆದ ಭತ್ತವೆಲ್ಲ ತೆನೆಯಿಂದ ಕಳಚಿಕೊಂಡಿದೆ. ಮತ್ತೊಂದೆಡೆ ಕಟಾವು ಮಾಡಿದ್ದ ಭತ್ತದ ಬೆಳೆ ಮಳೆಪಾಲಾಗಿದೆ. ತೊಳ್ಳಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಿಪಲ್ಲಿ, ಸುಜ್ಞಾನಂಪಲ್ಲಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಧಾರಕಾರ ಅಲಿಕಲ್ಲು ಮಳೆಯಾಗಿದೆ.


ಸಂಬಂಧಿತ ಟ್ಯಾಗ್ಗಳು

Hail stone Farmers ಧಾರಕಾರ ಎಕರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ