ವೈ.ಎ.ನಾರಾಯಣಸ್ವಾಮಿಗೆ ಚುನಾವಣಾಧಿಕಾರಿ ಎಚ್ಚರಿಕೆ!

Election officer warned to YA Narayanaswamy

14-05-2018

ಬೆಂಗಳೂರು: ಮರು ಮತದಾನ ನಡೆದ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆ ಬಳಿ ಪದೇ ಪದೇ ಆಗಮಿಸಿ ಮತದಾರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿಗೆ ಚುನಾವಣಾಧಿಕಾರಿ ಎಚ್ಚರಿಕೆ ನೀಡಿ ಕಳಹಿಸಿದ್ದಾರೆ.

ಮತಯಂತ್ರ ತಾಂತ್ರಿಕ ದೋಷದಿಂದ ಮುಂದೂಡಲಾಗಿದ್ದ ಮತದಾನವನ್ನು ಇಂದು  ನಡೆಸಲಾಗಿದ್ದು, ಈ ಸ್ಥಳಕ್ಕೆ ಬಿಜೆಪಿ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ ಪದೇ ಪದೇ ಭೇಟಿ ನೀಡುತಿದ್ದರು. ಎರಡು ಬಾರಿ ಮತಗಟ್ಟೆಗೆ ಬಂದಾಗಲೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.

ಆದರೂ ಮೂರನೇ ಬಾರಿಯೂ ನಾರಾಯಣಸ್ವಾಮಿ ಮತದಾನ ಸ್ಥಳಕ್ಕೆ ಬಂದಿದ್ದು, ಮತಗಟ್ಟೆ ಒಳಗೆ ಏಜೆಂಟ್ ಬದಲಿಗೆ ತಾವೇ ಕೂರುವುದಾಗಿ ಹೇಳಿದ್ದಾರೆ. ಚುನಾವಣಾಧಿಕಾರಿ ನರಸಿಂಹಪ್ಪ ನೀವು ಹೇಳಿದಂತೆ ಕೇಳಲು ಆಗುವುದಿಲ್ಲ ಮುಂದೆ ಮತಗಟ್ಟೆ ಬಳಿ ಸುಳಿಯಬೇಡಿ ಎಂದು ಎಚ್ಚರಿಕೆ ಕೊಟ್ಟು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

 


ಸಂಬಂಧಿತ ಟ್ಯಾಗ್ಗಳು

Y.A.Narayanaswamy election ವಾಪಸ್ ಎಚ್ಚರಿಕೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ