ಮಾಜಿ ಕಾರ್ಪೋರೇಟರ್ ಮೇಲೆ ಹಲ್ಲೆ

Ex Corporator Vedavyasa Bhat was assaulted

14-05-2018

ಬೆಂಗಳೂರು: ಬಿಬಿಎಂಪಿ ಮಾಜಿ ಸದಸ್ಯ ವೇದವ್ಯಾಸ್ ಭಟ್ ಅವರು ವಿವಿ ಪುರಂನ ಎನ್‍ಎಂಎಚ್ ಹೊಟೇಲ್ ಬಳಿ ಬೆಳಿಗ್ಗೆ ಹೊಗುತ್ತಿದ್ದಾಗ ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಮಾವಳ್ಳಿ ವಾರ್ಡ್‍ನ ಮಾಜಿ ಕಾರ್ಪೋರೇಟರ್ ವೇದವ್ಯಾಸ್ ಭಟ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೇಪರ್ ಏಜೆನ್ಸಿ ನಡೆಸುತ್ತಿದ್ದ ವೇದವ್ಯಾಸ ಭಟ್ ಅವರು ಬೆಳಿಗ್ಗೆ 6.30ರ ವೇಳೆ ಎನ್‍ಎಂಎಚ್ ಹೊಟೇಲ್‍ ಬಳಿ ಪೇಪರ್ ಗಳನ್ನು ಕೊಡಲು  ಹೋಗುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ವೇದವ್ಯಾಸ್ ಭಟ್ ಮುಖಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ದೂರಿನಲ್ಲಿ ನಾಲ್ವರು ದುಷ್ಕರ್ಮಿಗಳು ಕೈಗಳಿಂದಲೇ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ರಾಜಕೀಯ ಮಾಡುತ್ತೀಯಾ? ನಿನಗೆ ರಾಜಕೀಯ ಬೇಕಾ? ಎಂದು ಪ್ರಶ್ನಿಸುತ್ತಾ ಹಲ್ಲೆ ನಡೆಸಿದ್ದಾರೆ ಎಂದು  ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ವೇದವ್ಯಾಸ್ ಭಟ್ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ರಾಜಕೀಯ ದ್ವೇಷದಿಂದಲೇ ಈ ಹಲ್ಲೆ ನಡೆದಿದೆ ಎಂದು ಶಂಕಿಸಲಾಗಿದೆ ವೇದವ್ಯಾಸ್ ಭಟ್ 10 ವರ್ಷಗಳ ಹಿಂದೆ ಮಾವಳ್ಳಿ ವಾರ್ಡ್‍ನ ಕಾರ್ಪೋರೇಟರ್ ಆಗಿದ್ದರು.

 


ಸಂಬಂಧಿತ ಟ್ಯಾಗ್ಗಳು

veda vyasa bhatt corporator ವಿಕ್ಟೋರಿಯಾ ಪೇಪರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


  • Professional