ನಾವು ಹೆದರುವುದಿಲ್ಲ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಗುಡುಗು !

Kannada News

23-05-2017

ಮೈಸೂರು:- ಸರ್ಕಾರ ಹಳೆಯ ಕೇಸ್ ಗಳನ್ನು ಕೆದಕುವ ಮೂಲಕ ಎರಡು ಪಕ್ಷಗಳಿಗೂ ತೊಂದರೆ ನೀಡುತ್ತಿದೆ.ಆದರೆ ನಾವು ಅದಕ್ಕೆ ಹೆದರುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉಳಿ ಪೆಟ್ಟು ಬಿದ್ದಷ್ಟು ಶಿಲೆಯು ಬಲಿಷ್ಠವಾಗಿ ಸುಂದರ ಶಿಲ್ಪವಾಗಿ ಹೊರಹೊಮ್ಮತ್ತದೆ ಎಂದರು. ವಿಶ್ವನಾಥ್ ಪಕ್ಷ ಸೇರುವ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ದೇವರ ದರ್ಶನಕ್ಕಾಗಿ ಇಲ್ಲಿಗೆ ಆಗಮಿಸಿದ್ದೇನೆ. ಚಾಮಾರಾಜನಗರದಿಂದ ಪಕ್ಷದ ಕೆಲಸ ಶುರುಮಾಡಿದ್ದೇನೆ. ಮೈಸೂರಿನ ಜೆಡಿಎಸ್ ಶಾಸಕರು ಪಕ್ಷ ಬಿಡುವ ವಿಚಾರ, ಉಹಾಪೋಹವಷ್ಟೆ.ಅದರ ಬಗ್ಗೆ ಹೆಚ್ಚಿನ ಚರ್ಚೆ ಬೇಡ ಎಂದು ತಿಳಿಸಿದರು. 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ