ಮೈಸೂರಲ್ಲಿ ಎರಡು ಕಡೆ ಮತ ಎಣಿಕೆ

Mysore: Counting of votes at two places

14-05-2018

ಮೈಸೂರು ಜಿಲ್ಲಾ ವ್ಯಾಪ್ತಿಯ 11 ವಿಧಾನಸಭಾ ಕ್ಷೇತ್ರಗಳಿಗೆ ಮೇ 12ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 15ರಂದು ನಡೆಯಲಿದೆ. ಸ್ಪರ್ಧಾ ಕಣದಲ್ಲಿರುವ ಒಟ್ಟು 147 ಅಭ್ಯರ್ಥಿಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಮೈಸೂರಿನ ಮಹಾರಾಣಿ ವಾಣಿಜ್ಯ ಕಾಲೇಜು ಮತ್ತು ಕೂರ್ಗಳ್ಳಿಯ ಎನ್ ಐಇ-ಐಟಿ  ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. 15ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆಯು ನಡೆಯಲಿದ್ದು, ಮಹಾರಾಣಿ ಕಾಲೇಜಿನಲ್ಲಿ ಹುಣಸೂರು, ಹೆಚ್.ಡಿ.ಕೋಟೆ, ನಂಜನಗೂಡು, ಟಿ.ನರಸಿಪುರ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

ಕೂರ್ಗಳ್ಳಿಯ ಎನ್ ಐಇ-ಐಟಿ ಕಾಲೇಜಿನಲ್ಲಿ ಪಿರಿಯಾಪಟ್ಟಣ, ಕೆಆರ್ ನಗರ, ಚಾಮರಾಜ, ವರುಣ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದು ಈ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಇಡೀ ರಾಜ್ಯ ಎದುರು ನೋಡುತ್ತಿದೆ.

 

 


ಸಂಬಂಧಿತ ಟ್ಯಾಗ್ಗಳು

vote EMV ಫಲಿತಾಂಶ ನಿರ್ಧಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good
  • Ravi
  • Selp