ವದಂತಿಯಿಂದ ಗ್ರಾಮಸ್ಥರಲ್ಲಿ ಭೀತಿ!

villagers Scared of rumors at pavagada

14-05-2018

ತುಮಕೂರು: ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಮಕ್ಕಳ ಅಪಹರಣವಾಗುತ್ತಿದೆ ಎಂಬ ವದಂತಿಗೆ ಬೆದರಿದ ಗ್ರಾಮಸ್ಥರು, ರಾತ್ರಿ ಇಡೀ ನಿದ್ದೆಗೆಟ್ಟು ಮಕ್ಕಳನ್ನು ಕಾಯುತ್ತಿದ್ದರು. ಮಕ್ಕಳನ್ನು ಅಪಹರಣ ಮಾಡಿ ಅಂಗಾಂಗಳನ್ನು ಕದಿಯುತ್ತಾರೆಂಬ ವದಂತಿ ಹಬ್ಬಿದ್ದ ಹಿನ್ನೆಲೆ, ಅಪರಿಚಿತರು ಗ್ರಾಮಕ್ಕೆ ಬರದಂತೆ ಗ್ರಾಮಸ್ಥರು ಕಾದುಕುಳಿತಿದ್ದರು. ಆಂಧ್ರ ಗಡಿಭಾಗದ ಹಳ್ಳಿಗಳಲ್ಲಿ ವಾಟ್ಸ್ ಅಪ್, ಫೇಸ್ ಬುಕ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ವದಂತಿ ಹಬ್ಬಿದೆ. ಕಿಡ್ನಿ, ಹೃದಯಕ್ಕಾಗಿ ನೆರೆಯ ಆಂಧ್ರದಿಂದ‌ ಬಂದಿರುವ ಮಕ್ಕಳ ಅಪಹರಣಾಕಾರರ ತಂಡ ಮಕ್ಕಳನ್ನು ದಾರುಣವಾಗಿ ಹತ್ಯೆಗೈಯ್ಯುತ್ತಾರೆಂಬ ವದಂತಿ ಮತ್ತು ಮಾಹಿತಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇವುಗಳನ್ನು ಕಂಡು ಜನರು ಭಯ ಭೀತರಾಗಿದ್ದಾರೆ. ಅದಲ್ಲದೇ ವದಂತಿಗೆ ಪುಷ್ಠಿಯಂತೆ ನಿನ್ನೆ ರಾತ್ರಿ ಯುವತಿಯೊಬ್ಬಳು ಕಣ್ಮರೆಯಾಗಿದ್ದಾಳೆ. ಬಹಿರ್ದೆಸೆಗೆ ತೆರಳಿದ್ದ ಪೊನ್ನಸಮುದ್ರ ಗ್ರಾಮದ ಯುವತಿ ಕಣ್ಮರೆಯಿಂದ ಗ್ರಾಮಸ್ಥರು ಮತ್ತಷ್ಟು ಹೆದರಿದ್ದಾರೆ. ಪಳ್ಳವಳ್ಳಿ, ಪೊನ್ನಸಮುದ್ರ, ದೊಡ್ಡಹಳ್ಳಿ, ಕೆ.ರಾಂಪುರ ಸೇರಿದಂತೆ ಗಡಿ ಭಾಗದ ಹಳ್ಳಿಗಳಲ್ಲಿ ವದಂತಿ ಹಬ್ಬಿದೆ.


ಸಂಬಂಧಿತ ಟ್ಯಾಗ್ಗಳು

Pavagada abduction ಕಣ್ಮರೆ ಸಾಮಾಜಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


  • Bb
  • Professional
  • Professional
  • cc
  • Professional
  • Professional