ವಿವಿ ಪ್ಯಾಟ್ ಮತ್ತು ಪಿಂಕ್ ಮತಗಟ್ಟೆ ಈ ಬಾರಿ ವಿಶೇಷ

VVPAT and Pink Booth this time special

11-05-2018

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಚಲಾಯಿಸಿದ ಮತ ಖಾತರಿಪಡಿಸುವ ವಿವಿ ಪ್ಯಾಟ್ ಹಾಗೂ ಮಹಿಳಾ ಮತದಾರರನ್ನು ಉತ್ತೇಜಿಸುವ ಪಿಂಕ್ ಮತಗಟ್ಟೆಗಳನ್ನು ಬಳಸುತ್ತಿರುವುದು ಈ ಬಾರಿ ಚುನಾವಣೆಯಲ್ಲಿ ವಿಶೇಷವಾಗಿದೆ.

ವಿದ್ಯುನ್ಮಾನ ಮತಯಂತ್ರದ ಬಗ್ಗೆ ಹಲವು ಆಕ್ಷೇಪಗಳು, ಸಂದೇಹಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತದ ಚುನಾವಣಾ ಆಯೋಗ ಶನಿವಾರ ನಡೆಯುವ ಮತದಾನದ ಸಂದರ್ಭದಲ್ಲಿ ವಿವಿಪ್ಯಾಟ್ ಬಳಕೆ ಮಾಡಲಿದೆ. ಪ್ರತಿಯೊಬ್ಬ ಮತದಾರರು ತಾವು ಚಲಾಯಿಸಿದ ಮತ ನಿರ್ದಿಷ್ಟ ಚಿಹ್ನೆಗೆ ಬಿದ್ದಿದೆಯೇ, ಇಲ್ಲವೇ ಎಂಬುದನ್ನು ವಿವಿಪ್ಯಾಟ್ ಯಂತ್ರದಲ್ಲಿ 6 ಸೆಕೆಂಡ್‍ಗಳ ಕಾಲ ವೀಕ್ಷಿಸಬಹುದಾಗಿದೆ. ಲೋಪ ಕಂಡುಬಂದರೆ ಮತದಾರರು ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬ ಮತದಾರ ಚಲಾಯಿಸಿದ ಮತವು ಮತಯಂತ್ರದಲ್ಲಿ ದಾಖಲಾಗುವುದರ ಜೊತೆಗೆ ವಿವಿಪ್ಯಾಟ್‍ನಲ್ಲಿ ಮುದ್ರಿತವಾಗಿ ಸಂಗ್ರಹವಾಗುತ್ತದೆ. ಮತ ಎಣಿಕೆ ದಿನದಂದು ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ವಿವಿಪ್ಯಾಟ್ ಯಂತ್ರದಲ್ಲಿನ ಮತಗಳನ್ನು ಮತ್ತು ವಿದ್ಯುನ್ಮಾನ ಮತಯಂತ್ರದ ಮತಗಳನ್ನು ಹೋಲಿಕೆ ಮಾಡಿ ಖಾತ್ರಿಪಡಿಸಿಕೊಳ್ಳಲಾಗುತ್ತದೆ.

ಪಿಂಕ್ ಮತಗಟ್ಟೆ:

ಮಹಿಳಾ ಮತದಾರರ ಪ್ರಮಾಣ ಹೆಚ್ಚಿಸಲು ಇದೇ ಮೊದಲ ಬಾರಿಗೆ ಸಖಿ ಅಥವಾ ಗುಲಾಬಿ ಬಣ್ಣದ(ಪಿಂಕ್) ಮತಗಟ್ಟೆಗಳನ್ನು ತೆರೆಯಲಾಗಿದೆ. ವಿಶೇಷ ಆಕರ್ಷಣೆಯಾಗುವಂತೆ ಮತಗಟ್ಟೆಗಳಿಗೆ ಗುಲಾಬಿ ಬಣ್ಣವನ್ನು ಬಳಿಯಲಾಗಿರುತ್ತದೆ. ಭದ್ರತಾ ಸಿಬ್ಬಂದಿ, ಮತಗಟ್ಟೆ ಸಿಬ್ಬಂದಿ ಎಲ್ಲರೂ ಮಹಿಳೆಯರೇ ಇರುತ್ತಾರೆ. ಮಹಿಳಾ ಮತದಾರರು ಹೆಚ್ಚಾಗಿರುವ ಮತಗಟ್ಟೆಗಳಲ್ಲಿ ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದೆ. ರಾಜ್ಯದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಪಿಂಕ್ ಮತಗಟ್ಟೆ ತೆರೆಯಲಾಗಿದ್ದು, ಒಟ್ಟು 600 ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದೆ.


ಸಂಬಂಧಿತ ಟ್ಯಾಗ್ಗಳು

Pink booth election ಭದ್ರತಾ ಸಿಬ್ಬಂದಿ ಮತಗಟ್ಟೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ