ಭಾರೀ ಮಳೆಗೆ ವೃದ್ಧೆ ಬಲಿ

Heavy Rain A old lady died

11-05-2018

ಬೆಂಗಳೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ವೃದ್ಧೆ ಬಲಿಯಾಗಿರುವ ಘಟನೆ ಕೆಪಿ ಅಗ್ರಹಾರದ 6ನೇ ಕ್ರಾಸ್‍ನಲ್ಲಿ ನಡೆದಿದೆ. ಬೆಟ್ಟಮ್ಮ ಸರ್ಕಲ್‍ನ ರತ್ನಮ್ಮ (55) ಮೃತ ವೃದ್ಧೆ. ಮನೆಯಲ್ಲಿ ವೃದ್ಧೆ ರತ್ನಮ್ಮ ಒಬ್ಬರೇ ವಾಸವಾಗಿದ್ದರು. ಮನೆಯ ಪಕ್ಕದಲ್ಲೇ ರಾಜಕಾಲುವೆ ದುರಸ್ಥಿಯಾಗುತ್ತಿದ್ದು, ರಾತ್ರಿಯ ಭಾರೀ ಮಳೆಗೆ ಏಕಾಏಕಿ ಮನೆಗೆ ಒಳಚರಂಡಿ ನೀರು ನುಗ್ಗಿದೆ.ಈ ವೇಳೆ ಮನೆಯಿಂದ ಹೊರಬರಲಾರದೇ ವೃದ್ಧೆ ಸಾವಿಗೀಡಾಗಿದ್ದಾರೆ. ಕೆಪಿ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Heavy Rain death ವೃದ್ಧೆ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ