ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ!

doctor

11-05-2018

ಬೆಂಗಳೂರು: ಗೋರಗುಂಟೆ ಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಲಕನೊಬ್ಬ ಮೃತಪಟ್ಟಿರುವ ಆರೋಪ ಕೇಳಿಬಂದಿದೆ.

ವೈದ್ಯರ ಬೇಜಾವ್ದಾರಿತನದಿಂದ ಮಹಾಲಕ್ಷ್ಮಿ ಲೇಔಟ್‍ನ ಸುರೇಶ್ ಮತ್ತು ಅಂಜಲಿಯ ದಂಪತಿಯ ಪುತ್ರ ಮಗೇಂದ್ರನ್ (12) ಮೃತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ನಿನ್ನೆ ಬೆಳಗ್ಗೆ ತಲೆ ಸುತ್ತಿ ಬಿದ್ದ ಎಂದು ಮಗೇಂದ್ರನ್‍ನನ್ನು ಗೋರಗುಂಟೆಪಾಳ್ಯದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆವು. ಆದರೆ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಬಿಲ್ ಕಟ್ಟುವವರೆಗೆ ಚಿಕಿತ್ಸೆಯನ್ನು ಕೊಡಲಿಲ್ಲ. ಬಳಿಕ 30 ಸಾವಿರ ಹಣ ಕಟ್ಟಿದ ಮೇಲೆ ಚಿಕಿತ್ಸೆ ಆರಂಭಿಸಿದ್ದರು.

ನಾವು ಮಗವನ್ನು ಮುಟ್ಟಿದಾಗ ಆತನ ದೇಹ ತಣ್ಣಾಗಿರುವುದು ಕಂಡು ಬಂದಿದೆ. ಈ ವೇಳೆ ಏನಾಗಿದೆ ಹೇಳಿ ಎಂದು ಕೇಳಿದೆವು. ಆಗ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ಇನ್ನು ಬಾಲಕ ಮಧ್ಯಾಹ್ನವೇ ಮೃತಪಟ್ಟಿದ್ದು, ಮಗನ ಮೃತದೇಹ ಕೊಡಿ ಅಂತಾ ಕೇಳಿದರೆ 5 ನಿಮಿಷ, 10 ನಿಮಿಷ ಎಂದು ಹೇಳಿಕೊಂಡು ಬಂದಿದ್ದಾರೆ. ರಾತ್ರಿ 8 ಗಂಟೆ ಕಳೆದರೂ ಬಾಲಕನ ಮೃತದೇಹವನ್ನ ಕೊಡದೆ ನಂತರ ಪೊಲೀಸರಿಗೆ ಕರೆ ಮಾಡಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮೃತ ಮಗೇಂದ್ರನ್ ತಂದೆ ಶರತ್ ಆರೋಪಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

doctor Patient ನಿರ್ಲಕ್ಷ್ಯ ಸಿಬ್ಬಂದಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ