ಮದು ಮಗಳನ್ನು ಕರೆದೊಯ್ಯುತ್ತಿದ್ದ ಕಾರಿಗೆ ಲಾರಿ ಡಿಕ್ಕಿ.

Kannada News

23-05-2017

ಕಲ್ಬುರ್ಗಿ:- ಮದು ಮಗಳನ್ನು ಕರೆದೊಯ್ಯುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಐವರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ದೇವರ್ಗಿ ತಾಲ್ಲೂಕಿನ ವಂದೇವಾಳ ಬಳಿ ನಡೆದಿದೆ. ಘಟನೆಯಲ್ಲಿ ಮದು ಮಗಳು ಜ್ಯೋತಿ (24), ಭೂಮಿಕಾ (5), ಷಣ್ಮುಖ್ (35),ಅಮೋಘ್ (25),ಓಂಕಾರ್ (8), ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಗುಲ್ಬುರ್ಗಿಯ ಸಿಂದಗಿ ತಾಲ್ಲೂಕಿನ ಮೊರಟಗಿ ಗ್ರಾಮಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮದುವೆಯ ಮೆಹಂದಿ ಮಾಸುವ ಮುನ್ನವೇ ನವ ವಧು ಮೃತಪಟ್ಟಿರುವುದು ಕುಟುಂಬ ಸದಸ್ಯರಲ್ಲಿ ಆಘಾತ ಮೂಡಿಸಿದೆ. ಮದುವೆಗೆ ಬಂದಿದ್ದ ನೂರಾರು ಮಂದಿ ಅಪಘಾತದ ಮಾಹಿತಿ ತಿಳಿದು ಕಣ್ಣೀರು ಹಾಕಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ