ಯುವಕ-ಯುವತಿಯರ ಹೆಸರಲ್ಲಿ ದೋಖಾ

cheating In the name of girls and boys name in facebook: one arrested

11-05-2018

ಬೆಂಗಳೂರು: ಫೇಸ್‍ಬುಕ್ ನಲ್ಲಿ ನಕಲಿ ಅಕೌಂಟ್ ತೆರದು ಯುವಕ-ಯುವತಿಯರ ಹೆಸರಿನಲ್ಲಿ ಲಕ್ಷಾಂತರ ರೂಗಳ ವಂಚನೆ ನಡೆಸಿದ್ದ ನೈಜೀರಿಯನ್‍ ಒಬ್ಬನನ್ನು ಸೈಬರ್ ಕ್ರೈಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನೈಜೀರಿಯಾದ ಕ್ರಿಶ್ಚಿಯನ್ ಉಲುಮಿಸಿ( 39) ಬಂಧಿತ ಆರೋಪಿಯಾಗಿದ್ದಾನೆ, ಕ್ರಿಶ್ಚಿಯನ್ ಉಲುಮಿಸಿಯಿಂದ 2 ಲ್ಯಾಪ್‍ಟಾಪ್, 3 ಮೊಬೈಲ್, 4 ಸಿಮ್ ಕಾರ್ಡ್, 2 ಪಾಸ್ಪೊರ್ಟ್, 4 ಡಾಂಗಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 2013ರಲ್ಲಿ ನೈಜೀರಿಯಾದಿಂದ ವ್ಯಾಪಾರಿ ವೀಸಾದಡಿ ಬೆಂಗಳೂರಿಗೆ ಬಂದಿದ್ದ ಆರೋಪಿ ಬೇರೆ ಬೇರೆ ಹೆಸರುಗಳಲ್ಲಿ ಯುವಕ ಮತ್ತು ಯುವತಿಯರ ಹೆಸರಿನಲ್ಲೂ ನಕಲಿ ಅಕೌಂಟ್ ತೆರೆದು ಚಾಟ್ ಮಾಡುತ್ತಿದ್ದನು.

ಆರೋಪಿ ಯುವಕರಿಗೆ ತಾನು ವಿಧವೆ ಹಾಗೂ ಯುವತಿಯರಿಗೆ ವಿಧುರ ಎಂದು ನಂಬಿಸುತ್ತಿದ್ದನು. ನಾನು ಬ್ರಿಟಿಷ್ ನೇವಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ನಿಮಗೆ ಪ್ರೀತಿಯಿಂದ ಉಡುಗೊರೆ ಕೊಡುವುದಾಗಿ ನಂಬಿಸಿ ನಂತರ ಕಸ್ಟಂನಲ್ಲಿ ಗಿಫ್ಟ್ ಸಿಕ್ಕಿಹಾಕಿಕೊಂಡಿದೆ ಅದಕ್ಕೆ ಹಣ ಪಾವತಿಸಬೇಕೆಂದು 25 ಸಾವಿರದಿಂದ ಎರಡು ಲಕ್ಷದವರೆಗೂ ಹಣವನ್ನ ತನ್ನ ಖಾತೆಗೆ ಜಮಾ ಮಾಡಿಸಿಕೊಂಡಿದ್ದನು.

ಹಣ ಪಾವತಿಯಾದ ನಂತರ ಫೇಸ್ ಬುಕ್ ಅಕೌಂಟನ್ನು ಸ್ಥಗಿತಗೊಳಿಸುತ್ತಿದ್ದನು. ಕ್ರಿಶ್ಚಿಯನ್ ಉಲುಮಿಸಿಯಿಂದ 2 ಲ್ಯಾಪ್‍ಟಾಪ್, 3 ಮೊಬೈಲ್, 4 ಸಿಮ್ ಕಾರ್ಡ್, 2 ಪಾಸ್ಪೊರ್ಟ್, 4 ಡಾಂಗಲ್ ಗಳನ್ನು ಸೈಬರ್ ಕ್ರೈಂ ಪೊಲೀಸರ ವಶಕ್ಕೆ ಪಡೆದಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ