‘ಓಎಂಸಿ ಡೀಲ್ ಗೂ ನನಗೂ ಸಂಬಂಧವಿಲ್ಲ’-ಶ್ರೀರಾಮುಲು11-05-2018

ಬಳ್ಳಾರಿ: ಓಎಂಸಿ ಮೈನಿಂಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದ ಶ್ರೀರಾಮುಲು. 'ಯಾರ್ಯಾರೋ ಬರ್ತಿರ್ತಾರೆ, ಮಾತನಾಡಿರ್ತಾರೆ ಆ ವಿಚಾರಕ್ಕೂ ನನಗೂ ಸಂಬಂಧವಿಲ್ಲ' ಎಂದು ಹೇಳಿದ್ದಾರೆ. ಮೊಳಕಾಲ್ಮೂರಿನಲ್ಲಿ  2 ಕೋಟಿ ಹಣ ಪತ್ತೆಯಾಗಿರುವ ವಿಚಾರವಾಗಿಯೂ 'ಹಣ ಸಿಕ್ಕಿರುವ ಬಗ್ಗೆ ನನಗೇನು ಗೊತ್ತಿಲ್ಲ' ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬಾದಾಮಿಯಲ್ಲಿ ನಡೆದ ರೋಡ್ ಶೋ ನೋಡಿ ಮೆಚ್ಚಿದ್ದಾರೆ. ನಿನ್ನೆ ಸೇರಿದ ಜನಸ್ತೋಮ ನೋಡಿದರೆ ಇದು ಐತಿಹಾಸಿಕ ಕ್ಷಣ, ಬಿಜೆಪಿ ಶಕ್ತಿ ಪ್ರದರ್ಶನವಾಗಿದೆ. 140ಕ್ಕೂ ಹೆಚ್ಚು ಸೀಟುಗಳು ಗೆಲ್ಲುತ್ತೇವೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

B.Sriramulu Mining ಡೀಲ್ ಐತಿಹಾಸಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ