ಮತಗಟ್ಟೆಗೆ ವಾಮಾಚಾರ ಓರ್ವನ ಬಂಧನ

An attempt to witchcraft in polling booth: one arrested

11-05-2018

ತುಮಕೂರು: ಮತಗಟ್ಟೆಗೆ ವಾಮಾಚಾರ ಮಾಡಲು ಯತ್ನಿಸಿರುವ ಘಟನೆ ತುಮಕೂರಿನ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ನೆಲ್ಲೂರಿನಲ್ಲಿ ನಡೆದಿದೆ. ನಿಂಬೆಹಣ್ಣು, ಅಕ್ಕಿಕಾಳು,ಅರಿಶಿನ ಹಾಕಿ ವಾಮಾಚಾರಕ್ಕೆ ಯತ್ನಿಸಿರುವುದು ಕಂಡುಬಂದಿದೆ. ನೆಲ್ಲೂರು ಮತಗಟ್ಟೆ ಸಂಖ್ಯೆ 32 , ಅಂತಾಪುರ ಮತಗಟ್ಟೆ ಸಂಖ್ಯೆ 31, ಮಾಲಮಾಚಕುಂಟೆ ಮತಗಟ್ಟೆ 30ರಲ್ಲಿ ರಲ್ಲಿ ಇದೇ ರೀತಿ ಮಾಡಲಾಗಿದೆ. ನಾಲ್ವರು ಅಪರಿಚಿತರು ವಾಮಾಚಾರಕ್ಕೆ ಯತ್ನಿಸಿದ್ದು, ವಾಮಾಚಾರ ಮಾಡುವಾಗ ಗ್ರಾಮಸ್ತರ ಕೈಗೆ ಸಿಕ್ಕಿಬಿದ್ದಾರೆ. ನಾಲ್ವರಲ್ಲಿ ಒಬ್ಬನನ್ನು ಹಿಡಿದು ಕೂಡಿ ಹಾಕಿದ್ದಾರೆ. ಮತ್ತೆ ಮೂವರು ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.

ಶಿವಸಂದ್ರ ಶಿವಮೂರ್ತಿ ಎಂದು ಗುರಿತಿಸಲಾದ ವ್ಯಕ್ತಿ ವಾಮಾಚಾರಕ್ಕೆ ಯತ್ನಿಸಿದ್ದು, ಶಿವಮೂರ್ತಿಯನ್ನ ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಚೇಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಸಂಬಂಧಿತ ಟ್ಯಾಗ್ಗಳು

pooling booth voting ವಾಮಾಚಾರ ದುಷ್ಕರ್ಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Your comment nice
  • vinay
  • Professional
Your comment nice sign
  • raju
  • Professional