‘ಉತ್ತಮ ಪ್ರಜಾಕೀಯ ಪಕ್ಷ’ ನೋಂದಣಿ11-05-2018

ಬೆಂಗಳೂರು: ರಾಜಕೀಯಕ್ಕೆ ಪ್ರಜಾಕೀಯ ಎನ್ನುವ ವ್ಯಾಖ್ಯಾನ ನೀಡಿ ರಾಜಕಾರಣಕ್ಕೆ ಎಂಟ್ರಿಯಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯದ ಮೊದಲ ಇನ್ನಿಂಗ್ಸ್ ಗೂ ಮುನ್ನವೇ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅರೇ ಇದೇನು ಅಂತೀರಾ?

ಹೌದು, ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷವನ್ನು ಲಾಂಚ್ ಮಾಡಿ ರಾಜ್ಯದ ಜನತೆಯಲ್ಲಿ ಭರವಸೆಯ ಬೀಜ ಭಿತ್ತಿ ಮಾಯವಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಪಾಲಿಟಿಕ್ಸ್ ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಕೆಪಿಜೆಪಿ ಪಕ್ಷವನ್ನು ಕಟ್ಟುತ್ತಾ ಈ ಬಾರಿಯ ಚುನಾವಣಾ ಕಣಕ್ಕೆ ಅಭ್ಯರ್ಥಿಗಳ ಆಯ್ಕೆ ವೇಳೆ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಹಾಗು ಉಪೇಂದ್ರ ನಡುವಿನ ಮನಸ್ತಾಪ ಕೆಪಿಜೆಪಿ ಈ ಬಾರಿ ಚುನಾವಣಾ ಕಣದಿಂದ ದೂರ ಉಳಿಯುವಂತೆ ಮಾಡಿತ್ತು. ಉಪೇಂದ್ರ ಹೇಳಿದಂತೆ ಕಾನ್ಸೆಪ್ಟ್ ಸಿದ್ದಪಡಿಸಿಕೊಂಡು ಬಂದಿದ್ದ ಟಿಕೆಟ್ ಆಕಾಂಕ್ಷಿಗಳು ನಿರಾಶೆಯಿಂದ ಮನೆಗೆ ಮರಳಿದ್ದರು. ಸ್ವತಃ ಉಪೇಂದ್ರ ಕೂಡ ಚುನಾವಣಾ ಕಣದಿಂದಲೇ ದೂರ ಉಳಿದಿದ್ದರು.

ಇದೀಗ ಚುನಾವಣಾ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿರುವ ವೇಳೆ ಉಪ್ಪಿ ರಾಜಕಾರಣಕ್ಕೆ ರೀ ಎಂಟ್ರಿ ಕೊಡುವ ಸುದ್ದಿ ನೀಡಿದ್ದಾರೆ. ಹೊಸ ಪಕ್ಷವನ್ನು ನೋಂದಾಯಿಸಿಕೊಂಡು ಬಂದಿದ್ದಾರೆ. 'ಎಲ್ಲರಿಗೂ ಸಿಹಿ ಸುದ್ದಿ !  ನಮ್ಮ “ ಉತ್ತಮ ಪ್ರಜಾಕೀಯ ಪಕ್ಷ “  ಭಾರತದ ಚುನಾವಣಾ ಆಯೋಗದಲ್ಲಿ ನೋಂದಣಿ ಯಾಗಿದೆ, ನಾವೆಲ್ಲರೂ ಸೇರಿ ಈಗಿಂದಲೇ ಈ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು “ ಪ್ರಜಾಕೀಯ “ ಸ್ಥಾಪಿಸಲು ಮುಂದಾಗೋಣ' ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡು ಪ್ರಜಾಕೀಯಕ್ಕೆ ಮತ್ತೆ ಮರುಜೀವ ಕೊಡಲು ಮುಂದಾಗಿದ್ದಾರೆ.

ಸಧ್ಯ ವಿಧಾನಸಭಾ ಚುನಾವಣೆ ಉಪ್ಪಿ ಕೈ ತಪ್ಪಿದರೂ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣಾ, ನಂತರ ನಡೆಯುವ ಬಿಬಿಎಂಪಿ ಚುನಾವಣೆ ಹಾಗು 2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಇದೀಗ ಉಪ್ಪಿ ಮುಂದಿದ್ದು ಅವರ ಪಕ್ಷ ಸ್ಪರ್ಧೆ ಮಾಡುವ ಅವಕಾಶ ಪಡೆದುಕೊಳ್ಳಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Olu paksha sariyada hesaru
  • manju
  • Professional