ಇಂದು ಮತ್ತು ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯ

karnataka election: today and tomorrow bmtc and ksrtc buses Variation

11-05-2018

ಬೆಂಗಳೂರು: ನಾಳೆ ವಿಧಾನಸಭೆ ಚುನಾವಣೆ ಹಿನ್ನೆಲೆ, ಚುನಾವಣೆ ಕಾರ್ಯಕ್ಕೆ ರಾಜ್ಯ ಸಾರಿಗೆ ಬಸ್ ಗಳ ಆಯೋಜನೆ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ಇಂದು ಮತ್ತು ನಾಳೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಸಂಚಾರದಲ್ಲೂ ವ್ಯತ್ಯಯವಾಗಲಿದೆ. 1493 ಬಸ್ ಗಳು ಚುನಾವಣಾ ಕಾರ್ಯಕ್ಕೆ ಬಿಎಂಟಿಸಿಯಿಂದ ಯೋಜನೆ ಮಾಡಲಾಗಿದೆ. 3800 ರಿಂದ 4000 ಬಸ್ ಗಳು ಕೆಎಸ್ ಆರ್ ಟಿಸಿಯಿಂದ ನೀಡಲಾಗಿದೆ. ಬಸ್ ವ್ಯತ್ಯಯದ ಬಗ್ಗೆ ಮುನ್ಸೂಚನೆ ನೀಡಿದ ಬಿಎಂಟಿಸಿ ಹಾಗು ಕೆಎಸ್ ಆರ್ ಟಿಸಿ ಅಧಿಕಾರಿಗಳು, ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿವೆ ಕೆಎಸ್ ಆರ್ಟಿಸಿ ಹಾಗು ಬಿಎಂಟಿಸಿ.


ಸಂಬಂಧಿತ ಟ್ಯಾಗ್ಗಳು

KSRTC BMTC ಪ್ರಯಾಣಿಕರು ಆಯೋಜನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ