ಸಂಗ್ರಹಿಸಿಟ್ಟಿದ್ದ 20 ಲಕ್ಷಕ್ಕೂ ಅಧಿಕ ಹಣ ಜಪ್ತಿ

More than 20 lakhs of money seized at bagalkot

11-05-2018

ಬಾಗಲಕೋಟೆ: ನಾಳೆ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಮತದಾರರಿಗೆ ಹಣದ ಆಮಿಷ ತೋರಿಸಿ ಸೆಳೆಯುವ ಯತ್ನಗಳು ನಡೆಯುತ್ತಿವೆ. ಅದರಂತೆ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸುಮಾರು 20 ಲಕ್ಷಕ್ಕೂ ಅಧಿಕ ಹಣವನ್ನು ಫ್ಲೈಯಿಂಗ್ ಸ್ಕ್ವಾಡ್ ಜಪ್ತಿ ಮಾಡಿದೆ. ಜಿಲ್ಲೆಯ ಇಳಕಲ್ ನಗರದ ಸಂದೀಪ್ ಮಜಿ ಎಂಬುವರ ಮನೆಯಲ್ಲಿ ಸಂಗ್ರಹಿಸಿದ್ದ ಹಣವನ್ನು ಖಚಿತ ಮಾಹಿತಿ ಮೇರೆಗೆ ಹುನಗುಂದ ಫ್ಲೈಯಿಂಗ್ ಸ್ಕ್ವಾಡ್ ತಂಡ ದಾಳಿ ಮಾಡಿ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದಾರೆ. ಉದ್ಯಮಿ ಕಮಲ್ ಲಾಲ್ ವರ್ಮಾ ಎಂಬುವರಿಗೆ ಸೇರಿದ ಹಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಚುನಾವಣಾಧಿಕಾರಿ ಶಶಿಧರ ಕುರೇರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ