ದೇವನಹಳ್ಳಿ ಚೆಕ್ ಪೋಸ್ಟ್ ಬಳಿ 17 ಲಕ್ಷ ವಶ

Rs17 lakh seized at Devanahalli check post

11-05-2018

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 7ರ ಬಳಿಯ ದೇವನಹಳ್ಳಿ ತಾಲ್ಲೂಕಿನ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 17 ಲಕ್ಷ  ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ತೆರಳುತ್ತಿದ್ದ ಇನ್ನೊವಾ ಕಾರನ್ನು ತಪಾಸಣೆಗೆ ಒಳಪಡಿಸಿದಾಗ 17 ಲಕ್ಷ ಹಣ ಪತ್ತೆಯಾಗಿದೆ. ನವೀನ್ ಕುಮಾರ್ ಎಂಬಾತ ದಾಖಲೆಗಳಿಲ್ಲದೆ ತೆಗೆದುಕೊಂಡು ಹೋಗುವಾಗ ಚುನಾವಣಾಧಿಕಾರಿಗಳು ತಪಾಸಣೆಗೆ ಒಳಪಡಿಸಿ ಹಣ ಜಪ್ತಿ ಮಾಡಿದ್ದಾರೆ. ಇನ್ನೊವಾ ಕಾರು ಹಾಗೂ ನವೀನ್ ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Air Port illegal ಇನ್ನೊವಾ ರಾಷ್ಟ್ರೀಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ