‘ಕಾಂಗ್ರೆಸ್ ಉತ್ತಮ ಸಂಸ್ಕೃತಿಯುಳ್ಳ ಪಕ್ಷ’-ಮಾತೆ ಮಹಾದೇವಿ10-05-2018

ಕಾಂಗ್ರೆಸ್ ಉತ್ತಮ ಸಂಸ್ಕೃತಿಯುಳ್ಳ ಪಕ್ಷ ಎಂದು ಮಾತೆ ಮಹಾದೇವಿ ಹೇಳಿದ್ದಾರೆ. ಕಾಂಗ್ರೆಸ್ ಪರ ಮತ್ತೊಮ್ಮೆ ಬ್ಯಾಟಿಂಗ್ ಮಾಡಿದ ಮಹಾದೇವಿ, ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ಮುಖಂಡರು ನಮ್ಮನ್ನು ಕೀಳು ಮಟ್ಟದಲ್ಲಿ ನಿಂದಿಸಿಲ್ಲ. ಆದರೆ ಬಿಜೆಪಿ ಮುಖಂಡರು ನಮ್ಮ ವಿರುದ್ಧ ಕೆಟ್ಟ ಪದಗಳನ್ನು ಪ್ರಯೋಗಿಸಿದ್ದಾರೆ ಎಂದು ದೂರಿದ್ದಾರೆ.

ಇದೇ ವೇಳೆ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ವಿರುದ್ಧ ಮಾತೆ ಮಹಾದೇವಿ ವಾಗ್ದಾಳಿ ನಡೆಸಿದ್ದಾರೆ. ಪ್ರಭಾಕರ್ ಕೋರೆ ನಮ್ಮನ್ನು ಕೆಳಮಟ್ಟದ ಮಾತುಗಳಿಂದ ನಿಂದಿಸಿದ್ದಾರೆ, ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು. ಸಚಿವ ಎಂ.ಬಿ ಪಾಟೀಲ್, ಶರಣಪ್ರಕಾಶ್ ಪಾಟೀಲ, ವಿನಯ್ ಕುಲಕರ್ಣಿಗೆ ಮತ ನೀಡುವಂತೆ ಅವರು ಕರೆ ನೀಡಿದರು. ಈ ಮೂವರು ಲಿಂಗಾಯಿತ ಧರ್ಮಕ್ಕಾಗಿ ದುಡಿದಿದ್ದಾರೆ, ಹೀಗಾಗಿ ಅವರಿಗೆ ಮತ ನೀಡುವಂತೆ ಮಾತೆ ಮಹಾದೇವಿ ಮನವಿ ಮಾಡಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ