‘ಕಾಂಗ್ರೆಸ್ ಪ್ರಣಾಳಿಕೆ ಜನಧ್ವನಿಯಾಗಿದೆ'-ರಾಹುಲ್

Rahul gandhi press meet at bengaluru

10-05-2018

ಬೆಂಗಳೂರು: ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಗೆ ಅತ್ಯುತ್ತಮ ಪ್ರಚಾರ ನಡೆಸಿದ್ದು, ಒಗ್ಗಟ್ಟಿನ ಪ್ರದರ್ಶನ ನೀಡಿದೆ. ಹಾಗೂ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ದೂರ ದೃಷ್ಟಿತ್ವವುಳ್ಳ ಪರಿಕಲ್ಪನೆ ನೀಡಿದೆ ಎಂದು ಎಐಸಿಸಿ ಮುಖ್ಯಸ್ಥ ರಾಹುಲ್‍ಗಾಂಧಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷದ ಪ್ರಣಾಳಿಕೆ ಜನಧ್ವನಿಯಾಗಿದೆ. ತಮ್ಮ ಸರ್ಕಾರ ಈ ಹಿಂದೆ ಜನಪರ ಕಾರ್ಯಕ್ರಮಗಳನ್ನು ಉತ್ತಮವಾಗಿ ಜಾರಿಗೆ ತಂದಿದೆ. ರೈತರ ಸಾಲವನ್ನು ಮನ್ನಾ ಮಾಡಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸಮುದಾಯಕ್ಕೆ ದೇಶದಲ್ಲೇ ಗರಿಷ್ಠ ಅನುದಾನ ಬಳಸಿಕೊಂಡಿದೆ ಎಂದು ಅವರು ಹೇಳಿದರು.

ಬಿಜೆಪಿ ಕೇವಲ ತಮ್ಮ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ಟೀಕಾಪ್ರಹಾರ ಮಾಡುವಲ್ಲಿ ನಿರತರಾಗಿದ್ದು, ರಾಜ್ಯದ ಅಭಿವೃದ್ಧಿಗೆ ಪೂರಕ ವಿಚಾರಗಳನ್ನು ಚುನಾವಣಾ ಪ್ರಚಾರದಲ್ಲಿ ವ್ಯಕ್ತಪಡಿಸಲಿಲ್ಲ ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಿಸಿದ ಅವರು, ಆಧಾರ ರಹಿತ ಆರೋಪಗಳು ಮತ್ತು ವಿಷ್ಯಾಂತರದಲ್ಲಿ ತೊಡಗಿದ್ದ ಪ್ರಧಾನಿಗಳು ಕೇವಲ ದ್ವೇಷ ಮತ್ತು ಕೋಪದ ಮಾತುಗಳನ್ನು ಆಡಿದರು ಎಂದು ದೂರಿದರು. ಭಾರತದ ವಿದೇಶ ನೀತಿ ಧ್ವಂಸಗೊಳಿಸುವಲ್ಲಿ ಮೋದಿ ಅವರು ಅಗ್ರ ಸ್ಥಾನದಲ್ಲಿದ್ದು, ಚೀನಾ ನಮ್ಮ ದೇಶವನ್ನು ಸುತ್ತುವರೆಯುವ ಆತಂಕದ ಬೆಳವಣಿಗೆ ನಡೆದಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಮಂತ್ರಿಗಳು ತಮ್ಮ ಹುದ್ದೆಗೆ ಸರಿಸಾಟಿಯಾದ ವರ್ತನೆಯನ್ನು ಮಾಡಲಿಲ್ಲ. ಅವರ ಭಾಷಣದ್ದುದ್ದಕ್ಕೂ ಅವರು, ಮಾಡಿದ ಭಾಷಣದಿಂದ ಅವರ ಹುದ್ದೆಯ ಸ್ಥಾನಮಾನ ಕುಂದಿದೆ ಎಂದರು. ಅವರು ಆಡಿದ ಮಾತುಗಳ ಮೇಲೆ ಜನ ವಿಶ್ವಾಸ ಮಾಡುವುದಿಲ್ಲ ಎಂದು ತಿಳಿಸಿದ ಅವರು, ತಮ್ಮ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Rahul gandhi press meet ವಿಶ್ವಾಸ ಪರಿಶಿಷ್ಟ ವರ್ಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ