ಸುಪ್ರೀಂನಲ್ಲಿ ಸಲ್ಲಿಸಿದ್ದ ಮುತಾಲಿಕ್ ಅರ್ಜಿ ವಜಾ

supreme court dismissed The application filed by Pramod Muthalik

10-05-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಧರ್ಮದ ಹೆಸರನ್ನು ಉಲ್ಲೇಖಿಸಿ ಮತಯಾಚನೆ ಮಾಡುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಿಂದೂ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.

ಮತದಾನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯ ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್‍ ಕರ್ ಮತ್ತು ಡಿ.ವೈ.ಚಂದ್ರಚೂಡ್ ಇದ್ದ ಪೀಠ ಹೇಳಿದೆ.

ಅಂತೆಯೇ ಅಲ್ಪಸಂಖ್ಯಾತರನ್ನು ಮುಖ್ಯ ವಾಹಿನಿಗೆ ತರುವ ಬಗ್ಗೆ ನೀಡಿರುವ ಭರವಸೆ ಧರ್ಮದ ಹೆಸರಿನ ಉಲ್ಲೇಖವಲ್ಲ ಎಂದೂ ಕೂಡ ಪೀಠ ಹೇಳಿದೆ. ಮತದಾನ ಪ್ರಕ್ರಿಯೆ ನಂತರ ಮುತಾಲಿಕ್ ಕಾನೂನು ಬದ್ಧ ಕ್ರಮಕ್ಕೆ ಕೋರಬಹುದು ಎಂದು ಪೀಠ ತಿಳಿಸಿದೆ.

 


ಸಂಬಂಧಿತ ಟ್ಯಾಗ್ಗಳು

supreme court pramod muthalik ನ್ಯಾಯಮೂರ್ತಿ ಮತದಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ