ಒಂದೇ ಕುಟುಂಬದ ಮೂವರು ನೀರುಪಾಲು

3 died from same family in a lake

10-05-2018

ಬೆಂಗಳೂರು: ಬಟ್ಟೆ ಒಗೆಯಲು ಹೋಗಿದ್ದ ಅಕ್ಕ-ತಂಗಿ ಸೇರಿ ಮೂವರು ಕೆರೆಯಲ್ಲಿ ಮಳುಗಿ ಮೂವರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಮನಗರದ ಬೊಳ್ಳಪ್ಪನಕೆರೆಯಲ್ಲಿ ನಡೆದಿದೆ. ಒಂದೇ ಕುಟುಂಬದ ಇಬ್ಬರು ಸಹೋದರಿಯರು ಹಾಗೂ ಐದು ವರ್ಷದ ಬಾಲಕ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಟ್ಟೆ ತೊಳೆಯಲು ಹೋಗಿದ್ದ ಲಕ್ಷ್ಮಮ್ಮ, ಕಮಲಮ್ಮ ಮತ್ತು ಮೂರ್ತಿ ಎನ್ನುವರ ಪುತ್ರ ನವೀನ್ ಕೆರೆಯಲ್ಲಿ ಮುಳುಗಿದವರು. ಲಕ್ಷ್ಮಮ್ಮನ ಶವ ಹೊರತೆಗೆದಿದ್ದು, ಕಮಲಮ್ಮ ಹಾಗೂ ನವೀನ್ ಶವಕ್ಕೆ ಹುಡುಕಾಟ ನಡೆದಿದೆ. ಕಾಲು ಜಾರಿ ಬಿದ್ದ ಬಾಲಕನನ್ನು ಕಾಪಾಡಲು ಹೋಗಿ ಇಬ್ಬರು ಸಹೋದರಿಯರು ಕೂಡ ನೀರು ಪಾಲಾಗಿದ್ದಾರೆ. ರಾಮನಗರದ ಐಜೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

 

 


ಸಂಬಂಧಿತ ಟ್ಯಾಗ್ಗಳು

family death ಮುಳುಗಿ ಹುಡುಕಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ