ನಮ್ಮಪ್ಪ ಪ್ರಧಾನಿಯಲ್ಲ ಹೆಚ್ಡಿಕೆಗೆ ಚೆಲುವರಾಯಸ್ವಾಮಿ ಟಾಂಗ್

cheluvarayaswamy tong to kumaraswamy

10-05-2018

ಕೊಪ್ಪಳ: ರಾಜಕಾರಣದಲ್ಲಿ ಹೆಚ್.ಡಿ ದೇವೇಗೌಡರ ಮುಂದೆ ನಾನು ಬಹಳ ಚಿಕ್ಕವನು. ಅವರ ಬಗ್ಗೆ ನಾನೇನು ಹೆಚ್ಚಾಗಿ ಮಾತಾಡಲ್ಲ. ಆದರೂ, ಈ ವಯಸ್ಸಲ್ಲಿ ಇಂತಹ ಮಾತುಗಳು ಬರ್ತವೆ ಅಂತಾ ಅನ್ಕೊಂಡಿರಲಿಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗೌಡರ ಫೋಟೋ ತೆಗೆದಿದ್ದರು. ಅದನ್ನ ಮತ್ತೆ ಹಾಕಿಸಲು ಅವರ ಮಕ್ಕಳು ಬಂದಿರಲಿಲ್ಲ. ನಾನು ಹಾಕಿಸಿದ್ದು, ಅದಕ್ಕಾಗಿ ಹೋರಾಟ ಮಾಡಿದವನು ನಾನು. ಕಣ್ಣಲ್ಲಿ ರಕ್ತ ಸುರಿಸಿ ಹೆಚ್.ಡಿ.ಕೆ ಅವರನ್ನು ಸಿಎಂ ಮಾಡಿದ್ದೇವೆ. ಪಕ್ಷ, ದೇವೇಗೌಡರು ಬೇಡ ಅಂದರು ಹೆಚ್ಡಿಕೆನ ಸಿಎಂ ಮಾಡಿದ್ದೆವು. ಅದನ್ನು ನೆನೆಸಿಕೊಳ್ಳದ ಕೃತಜ್ಞತೆ ಇಲ್ಲದವರು ನಾವಲ್ಲ. 'ನಮ್ಮಪ್ಪ ಪ್ರಧಾನಿಯಲ್ಲ, ಸಾಮಾನ್ಯ ರೈತನ ಮಗ ನಾನು' ಎಂದು ಕುಮಾರ ಸ್ವಾಮಿಗೆ ಚೆಲುವರಾಯ ಸ್ವಾಮಿ ಟಾಂಗ್ ಕೊಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Chaluvaraya Swamy Vidhana Soudha ದೇವೇಗೌಡರು ರಾಜಕಾರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ