ಪೋಸ್ಟ್ ಆಫೀಸಿನಲ್ಲಿ ಯುವಕನ ದಾಂಧಲೆ

A young boy tried to assault post office staff

10-05-2018

ಕೊಪ್ಪಳ: ಯುವಕನೊಬ್ಬ ಅಂಚೆ ಕಚೇರಿಯಲ್ಲಿ ದಾಂಧಲೆ ನಡೆಸಿದ್ದಾನೆ. ಕೊಪ್ಪಳ ನಗರದ ಕೇಂದ್ರ ಅಂಚೆ ಕಚೇರಿಯಲ್ಲಿ ಘಟನೆ ನಡೆದಿದೆ. ಸುಜಿತ್ ಅಲಿ ಎಂಬ ಯುವಕ ಈ ಕೃತ್ಯ ಎಸಗಿದ್ದಾನೆ. ಯುವಕನ ತಂದೆ ಅಂಚೆ ಕಚೇರಿಯಲ್ಲಿ ಸುಜಿತ್ ಅಲಿ ಹೆಸರಲ್ಲಿ ಖಾತೆ ತೆರೆದಿದ್ದರು. ಕೆಲ‌ ದಿನಗಳ ಹಿಂದಷ್ಟೇ ಅವರು ತೀರಿಕೊಂಡಿದ್ದರು. ತನ್ನ ಖಾತೆಯಲ್ಲಿನ ಹಣ ಹಾಗೂ ವ್ಯವಹಾರ‌ ಬಗ್ಗೆ ಸಿಬ್ಬಂದಿಗೆ ದಾಖಲೆ‌ ನೀಡಲು ಕೇಳಿದ್ದಾನೆ, ಈ ವೇಳೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಪೋಸ್ಟ್ ಮಾಸ್ಟರ್ ಸೇರಿ ಇತರರ ಮೇಲೆ‌ ಹಲ್ಲೆಗೆ ಯತ್ನಿಸಿದ್ದಾನೆ. ಆದರೆ ಅಲ್ಲಿನ ಸಿಬ್ಬಂದಿ ಎಲ್ಲರು ಸೇರಿ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

post office account ಸಿಬ್ಬಂದಿ ಖಾತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ