‘ನಿರೀಕ್ಷೆಯಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ’- ಬಿಎಸ್ವೈ10-05-2018

ಬಾಗಲಕೋಟೆ: ಬಾಗಲಕೋಟೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ. ಬಾಗಲಕೋಟೆಯಲ್ಲಿ ಸಿಎಂ ಅವರನ್ನು ಸೋಲಿಸಿ ವಾಲ್ಮೀಕಿ ನಾಯಕ ಶ್ರೀರಾಮುಲುರನ್ನು ಗೆಲ್ಲಿಸಲಿದ್ದಾರೆ, ನೂರಕ್ಕೆ ನೂರು ನನಗೆ ವಿಶ್ವಾಸ ಇದೆ. ವಾಲ್ಮೀಕಿ ಸಮಾಜದ ಹಿರಿಯ ನಾಯಕನನ್ನ ನಿಲ್ಲಿಸಿರೋದೆ ಗೆಲ್ಲಿಸೋಕೆ ಎಂದರು.

ಸಿಎಂ ಅವರನ್ನು ಚಾಮುಂಡೇಶ್ವರಿ, ಬಾದಾಮಿ ಎರಡೂ ಕ್ಷೇತ್ರದಲ್ಲಿ ಜನ ಸೋಲಿಸುತ್ತಾರೆ. ಹಿಂಡು ಹಿಂಡಾಗಿ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ ಅಂದರೆ ಅವರನ್ನು ಮನೆಗೆ ಕಳಿಸೋಕೆ ಬಂದಿದ್ದಾರೆ, ಗೆಲ್ಲಿಸೋಕೆ ಅಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದೇವೆ. ಇದೇ 17ರಂದು ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಇದು, ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯಾನೋ ಅಷ್ಟೇ ಸತ್ಯ ಎಂದು ಪುನಃ ನಾನೆ ಮುಖ್ಯಮಂತ್ರಿ ಆಗತ್ತೇನೆ ಎಂದು ಉಚ್ಚರಿಸಿದರು ಬಿಎಸ್ವೈ.

ರಾಜರಾಜೇಶ್ವರಿ ನಗರದಲ್ಲಿ ನಕಲಿ ಮತದಾರರ ಐಡಿ ಪತ್ತೆ ಪ್ರಕರಣದ ಕುರಿತು, ಕೇವಲ ಅಲ್ಲಿ ಅಷ್ಟೇ ಅಲ್ಲ ಬೀದರ್ ನಲ್ಲಿ, ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕಾಂಗ್ರೆಸ್ ನವರು ಈ ರೀತಿ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮ ನಿರೀಕ್ಷೆಯಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ. ಆ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

B.S.Yeddyurappa Voter ID ಅಪಮಾನ ನಿರೀಕ್ಷೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ