ಬಿಜೆಪಿ ಪ್ರಚಾರಕ್ಕೆ ಅಪ್ರಾಪ್ತ ಮಕ್ಕಳ ಬಳಕೆ!

BJP Roadshow at yadgir: children in campaign

10-05-2018

ಯಾದಗಿರಿ: ಬಿಜೆಪಿ ಮತಯಾಚನೆಗೆ ಅಪ್ರಾಪ್ತ ವಯಸ್ಸಿನ ಮಕ್ಕಳ ಬಳಕೆ ಮಾಡಿರುವುದು ಯಾದಗಿರಿ ನಗರದಲ್ಲಿ ಕಂಡುಬಂದಿದೆ. ಜಿಲ್ಲೆಯ ಯಾದಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ನಡೆಯುತ್ತಿರುವ ಪ್ರಚಾರ ಕಾರ್ಯದಲ್ಲಿ, ರೋಡ್ ಶೋ ನಲ್ಲಿ ಮಕ್ಕಳು ಭಾಗಿಯಾಗಿದ್ದರು. ಬಿಜೆಪಿ ಟೋಪಿ, ಮೋದಿ ಮುಖವಾಡ ಧರಿಸಿ ಬಾವುಟ ಹಿಡಿದ ಮಕ್ಕಳು ರೋಡ್ ಷೋ ನಲ್ಲಿ ಜೈಕಾರ ಹಾಕುತ್ತಿದ್ದರು. ಇಂದು ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಅದ್ದರಿಂದ ಭರ್ಜರಿ ಪ್ರಚಾರ ಮಾಡುತ್ತಿರುವ ವೆಂಕಟರೆಡ್ಡಿ ಮುದ್ನಾಳ್, ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಈ  ವೇಳೆ ಪ್ರಚಾರಕ್ಕೆ ಮಕ್ಕಳ ಬಳಕೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.


ಸಂಬಂಧಿತ ಟ್ಯಾಗ್ಗಳು

children campain ಅಪ್ರಾಪ್ತ ರೋಡ್ ಶೋ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ