ಮೋದಿ ಒಬ್ಬ ಫೇಕುಲಾಲ್ ಎಂ.ಬಿ ಪಾಟೀಲ ಲೇವಡಿ



10-05-2018

ವಿಜಯಪುರ: ಈ ಚುನಾವಣೆಯಲ್ಲಿ ದೇಶದ ಪ್ರಧಾನಿ‌ ನರೇಂದ್ರ ಮೋದಿ ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ಸಾಮಾನ್ಯವಾಗಿ ಪ್ರಧಾನಿ ಜಿಲ್ಲಾ ಕೇಂದ್ರಗಳಲ್ಲಿ ಪ್ರಚಾರ ಮಾಡುತ್ತಾರೆ. ಆದರೆ ಮೋದಿ ಬಬಲೇಶ್ವರದಲ್ಲಿ ಪ್ರಚಾರ ಮಾಡಿ, ಪ್ರಧಾನಿ ಹುದ್ದೆಯ ಮಹತ್ವ ಕಡಿಮೆ ಮಾಡಿದ್ದಾರೆ ಎಂದು ಸಚಿವ ಎಂ.ಬಿ‌ ಪಾಟೀಲ ಟೀಕೆ ಮಾಡಿದ್ದಾರೆ.

ಮೋದಿ ಒಬ್ಬ ಫೇಕುಲಾಲ್, ಬೇಟಿ ಬಚಾವೋ ಬೇಟಿ ಪಢಾವೋ ಎಲ್ಲ ಸುಳ್ಳು. ಹೆಣ್ಣು ಮಕ್ಕಳ‌ ಮೇಲೆ ಅತ್ಯಾಚಾರ ನಡೆದರು ಮೋದಿ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಜನಪರ ಕಾರ್ಯ ಮಾಡಿದ್ದಾರೆ. ಎಸ್/ಸಿ, ‌ಎಸ್/ಟಿ ಆ್ಯಕ್ಟ್ ಜಾರಿಗೆ ತಂದು ಹಲವು ಯೋಜನೆಯನ್ನು ಜಾರಿಗೆ ತಂದಿದೆ.

ನಮ್ಮ ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದೆ. ಬಸವಣ್ಣ ಬೇರೆ ಅಲ್ಲ ಅಂಬೇಡ್ಕರ್ ಬೇರೆ ಅಲ್ಲ. ಇಬ್ಬರೂ ಒಂದೆ. ಸಂವಿಧಾನ ಬದಲಾವಣೆ ಮಾಡುವುದಾಗಿ ಅನಂತ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ, ಅನಂತಕುಮಾರ್ ಹೇಳಿಕೆ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತದೆ. ಬಿಜೆಪಿ ಸಂವಿಧಾನ ಬದಲಿಸಲು ಮುಂದಾದರೆ ಜನರು ಅವರನ್ನು ಬದಲಾಯಿಸಲು ಸಿದ್ಧರಾಗಿದ್ದಾರೆ ಎಂದರು.

ಆರೋಗ್ಯ ಭಾಗ್ಯ, ವಿದ್ಯಾಸಿರಿ ಯೋಜನೆ ನಮ್ಮ ಸರ್ಕಾರದ ಕನಸಿನ ಯೋಜನೆ. ಪ್ರಧಾನಿ ಮೋದಿ ಮಾಧ್ಯಮವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದರು. ಪ್ರಧಾನಿ ಮೋದಿ ಚುನಾವಣಾ ವೇಳೆ ಕಪ್ಪು ಹಣ ಬಳಕೆ ಮಾಡಿದ್ದಾರೆ. ಉದ್ಯಮಿಗಳು ಮೋದಿ ಪರ ಹಣ ಹೂಡಿ, ಇದೀಗ ವಾಪಸ್ ಪಡೆಯುತ್ತಿದ್ದಾರೆ. ನೀರವ್ ಮೋದಿ ರೀತಿಯ ಹಲವು ಉದ್ಯಮಿಗಳು ಭ್ರಷ್ಟಾಚಾರ ಮಾಡಿ ದೇಶದಿಂದ ಫಲಾಯನ ಮಾಡಿದರು ಮೋದಿ ಪ್ರಶ್ನೆ ಮಾಡುತ್ತಿಲ್ಲ ಎಂದು ದೂರಿದ್ದಾರೆ.

ತಾನು ಬರ‌ ಮುಕ್ತ ರಾಜ್ಯವನ್ನು ಕಾಣಬೇಕು ಎಂದು ಪಣ ತೊಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕೆಲಸ ಮುಂದುವರೆಯಲು ಮತ್ತೊಮ್ಮೆ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರಬೇಕು. ಪ್ರಧಾನಿ‌ ಮೋದಿ ಜೈಲಿಗೆ ಹೋಗಿ ಬಂದ ಅಮೀತ್ ಷಾ, ಯಡಿಯೂರಪ್ಪ ಜೊತೆಯಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ನಾನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಹೇಳಿದ್ದಾರೆ.

ಮೇ 17ರಂದು ಅಧಿಕಾರ ಸ್ವೀಕರಿಸುವುದಾಗಿ ಯಡಿಯೂರಪ್ಪ ಹೇಳಿಕೆಗೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಅಸಾಧ್ಯ. ಅವರಿಗೆ ಅರಳು‌ ಮರಳು ಶುರುವಾಗಿದೆ. ವಯಸ್ಸಾದ ಕಾರಣ ಈ ರೀತಿ ಆಗುವುದು ಸಹಜ. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದು ಲೇವಡಿ ಮಾಡಿದ್ದಾರೆ. ನನಗೂ ಸಿಎಂ ಆಗುವ ಅರ್ಹತೆ ಇದೆ. ಆದರೆ, 2018 ಹಾಗೂ 2023ರ ಚುನಾವಣೆ ಬಳಿಕ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ