ಭೀಕರ ಅಪಘಾತ: ಡಿವೈಎಸ್ಪಿ ಸಾವು

Dangerous accident :DySP death

10-05-2018

ಬಾಗಲಕೋಟೆ: ಬಾಗಲಕೋಟೆಯ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಡಿವೈಎಸ್ಪಿ ಸೇರಿದಂತೆ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಸುದ್ದಿ ಪೊಲೀಸ್ ಇಲಾಖೆಗೆ ಬರ ಸಿಡಿಲಿನಂತೆ ಬಂದು ಅಪ್ಪಳಿಸಿದೆ. ಕಾನೂನು ಬಾಹಿರ ಚಟುವಟಿಕೆಗಳಿಗೆ ಸಿಂಹ ಸ್ವಪ್ನವಾಗಿ ತುಮಕೂರು ನಗರದ ತಿಲಕ್ ಪಾರ್ಕ್ ವೃತ್ತ ನೀರಿಕ್ಷಕರಾಗಿ ಕರ್ತವ್ಯ ನಿರ್ವಸಿದ್ದ ಬಾಳೇಗೌಡ(55), ಸಿಐಡಿ ಪಿಎಸ್‌ಐ ಕೆ.ಎಚ್.ಶಿವಸ್ವಾಮಿ(55) ಹಾಗೂ ಚಾಲಕ ವೇಣು ಗೋಪಾಲ(25) ಮೃತರು. 

ಬಾಳೇಗೌಡರು ಅತ್ಯಂತ ಜನಪ್ರಿಯ, ಸ್ನೇಹ ಮನೋಭಾವ ಹೊಂದಿದ್ದ ಅಧಿಕಾರಿಯಾಗಿದ್ದರು. ಇವರು ಕುಣಿಗಲ್ ಗೆ ವರ್ಗಾವಣೆ ಆಗಿ ಕೆಲಸ ನಿರ್ವಹಣೆ ಮಾಡಿದ್ದರು. ರಾಜ್ಯ ಸರ್ಕಾರ ಇವರ ಸೇವೆಯನ್ನು ಮನಗಂಡು ರಾಷ್ಟ್ರಪತಿಗಳ ಪದಕ, ಮುಖ್ಯ ಮಂತ್ರಿಗಳು ಪದಕ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ಇತ್ತೀಚೆಗಷ್ಟೇ ಇವರಿಗೆ ಬಡ್ತಿ ನೀಡಿ ಡಿವೈಎಸ್ಪಿಯಾಗಿ ಸಿಐಡಿಗೆ ವರ್ಗಾವಣೆ ಆಗಿತ್ತು. ಮೇ 12ರಂದು ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಕರ್ತವ್ಯಕ್ಕೆ ಬಾಗಲಕೋಟೆಗೆ ನಿಯೋಜನೆ ಮಾಡಲಾಗಿತ್ತು.

ಬೆಂಗಳೂರಿನಿಂದ ರಾತ್ರಿ 8 ಗಂಟೆಯಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿ 48 ರಸ್ತೆಯಲ್ಲಿ ಬರುವ ಕೋರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೋಟೆಲ್ ಒಂದರಲ್ಲಿ ಊಟ ಮಾಡಿ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.


ಸಂಬಂಧಿತ ಟ್ಯಾಗ್ಗಳು

Accident DYSP ರಾಷ್ಟ್ರೀಯ ಬಡ್ತಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ