ಕಾಂಗ್ರೆಸ್ ಕೈಯಲ್ಲಿ ದುಡ್ಡಿಲ್ಲ !

No money in congress hand !

09-05-2018

ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡ ಟಿ.ಎನ್.ಶೇಷನ್‍ರವರು ಅನುಷ್ಠಾನಕ್ಕೆ ತಂದ ಚುನಾವಣಾ ಸುಧಾರಣೆಗಳ ಕಾರಣದಿಂದಾಗಿ ಅಬ್ಬರದ ಚುನಾವಣಾ ಪ್ರಚಾರ ನಿಂತುಹೋಯಿತು. ರಸ್ತೆ ರಸ್ತೆಯಲ್ಲೆಲ್ಲಾ ಫ್ಲೆಕ್ಸ್‍ಗಳು, ಗೋಡೆಯ ಮೇಲೆಲ್ಲಾ ಬರಹಗಳು, ಕಂಡಕಂಡಲ್ಲಿ ಪೋಸ್ಟರ್‍ಗಳು, ಬಂಟಿಂಗ್‍ಗಳು, ಬ್ಯಾನರ್‍ಗಳು ರಾರಾಜಿಸುತ್ತಿದ್ದ ಕಾಲ ಅದು. ಆನಂತರದ ದಿನಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ನ್ಯೂಸ್ ಚಾನೆಲ್‍ಗಳಲ್ಲಿ ಜಾಹೀರಾತಿನ ಭರಾಟೆ ಜೋರಾಗಿ ಬೀದಿಯಲ್ಲಿ ಆರ್ಭಟ ಕಡಿಮೆಯಾಗಿಬಿಟ್ಟಿತು. ಈ ಭಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳೆಲ್ಲಾ ನ್ಯೂಸ್ ಚಾನೆಲ್‍ಗಳಲ್ಲಿ, ದಿನಪತ್ರಿಕೆಗಳಲ್ಲಿ ಮತ್ತು ನ್ಯೂಸ್ ವೆಬ್‍ಸೈಟ್‍ಗಳಲ್ಲಿ ಜಾಹೀರಾತನ್ನು ಹಾಕಿವೆ. ಹಾಗೇ ಬಿಜೆಪಿ, ಜೆಡಿಎಸ್ ಪಕ್ಷಗಳು ಮನರಂಜನಾ ವಾಹಿನಿಗಳಾಗಿರುವ ಕಲರ್ಸ್ ಕನ್ನಡ, ಜಿûೀ ಟಿವಿ. ಉದಯ ಟಿವಿ ಮತ್ತು ಸ್ಟಾರ್ ಸುವರ್ಣ ಮುಂತಾದ ಚಾನೆಲ್‍ಗಳಲ್ಲಿ ಯಥೇಚ್ಚವಾಗಿ ಜಾಹೀರಾತುಗಳನ್ನು ಹಾಕುತ್ತಿದೆ. ನ್ಯೂಸ್ ಚಾನೆಲ್‍ಗಳಲ್ಲಿ ಬರೀ ಶೇಕಡಾ 12 ರಿಂದ ಶೇಕಡಾ 15ರಷ್ಟು ಟಿ.ವಿ. ವೀಕ್ಷಣೆ ಇದ್ದರೆ ನಿಜವಾಗಿಯೂ ಬಹುತೇಕ ಜನರು ನೋಡುವುದು ಮನರಂಜನಾ ವಾಹಿನಿಗಳನ್ನೆ. ಆದರೂ ಕಾಂಗ್ರೆಸ್ ಪಕ್ಷ ಮಾತ್ರ ಈ ಮನರಂಜನಾ ವಾಹಿನಿಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‍ಗೆ ಸೆಡ್ಡು ಹೊಡೆಯುವಂತೆ ಜಾಹೀರಾತುಗಳನ್ನು ಯಾಕೆ ಹಾಕಿಲ್ಲ ಎಂದು ಕೇಳಿದರೆ ಅದಕ್ಕೆ ಅವರು ಕೊಡುವ ಉತ್ತರ ನಿಮ್ಮನ್ನು ದಂಗಾಗಿಸಬಹುದು. 
ಕರ್ನಾಟಕ ಮನರಂಜನಾ ವಾಹಿನಿಗಳಲ್ಲಿ ಜಾಹೀರಾತು ಹಾಕಲು ಕಾಂಗ್ರೆಸ್ ಪಕ್ಷದ ಹತ್ತಿರ ದುಡ್ಡಿಲ್ಲವಂತೆ. ಪ್ರತಿ ಮನರಂಜನಾ ವಾಹಿನಿಯಲ್ಲಿ ಜಾಹೀರಾತು ಹಾಕಲು ಕನಿಷ್ಠ ಒಂದು ಕೋಟಿ ರೂಪಾಯಿಯಾದರೂ ಬೇಕು, ಅಷ್ಟು ದುಡ್ಡನ್ನು ಎಲ್ಲಿಂದ ತರುವುದು ಎಂದು ಕೇಳುತ್ತಾರೆ ಕಾಂಗ್ರೆಸ್ ನಾಯಕರು. ಇನ್ನೊಬ್ಬ ಪ್ರಭಾವಿ ಮಂತ್ರಿಯವರು ಇನ್ನುಮುಂದಕ್ಕೆ ಹೋಗಿ ಹೇಳುತ್ತಾರೆ ಲೂಟಿ ಮಾಡಿದ್ದರೆ ನಮ್ಮ ಹತ್ತಿರ ದುಡ್ಡಿರುತ್ತಿತ್ತು ಲೂಟಿ ಮಾಡಿಲ್ಲವಲ್ಲ ಅದಕ್ಕೆ ಜಾಹೀರಾತು ಹಾಕಲು ಆಗಲಿಲ್ಲ ಎಂದು ಸಬೂಬು ಹೇಳುತ್ತಾರೆ.
ದುಡ್ಡು ಮಾಡಿಕೊಂಡ ರಾಜಕಾರಣಿಗಳಾರು ಪಕ್ಷಕ್ಕೆ ದುಡ್ಡುಕೊಡದಿರುವುದು ಇದಕ್ಕೊಂದು ಕಾರಣವೆಂದು ಕಾಂಗ್ರೆಸ್ ಪಕ್ಷವನ್ನು ಚೆನ್ನಾಗಿ ಬಲ್ಲವರು ಹೇಳುತ್ತಾರೆ. ಆದರೆ ಮನರಂಜನಾ ವಾಹಿನಿಗಳಲ್ಲಿ ಜಾಹೀರಾತು ಹಾಕದಿರುವುದರಿಂದ ಚುನಾವಣೆಯಲ್ಲಿ ಯಾವ ರೀತಿ ಫಲಿತಾಂಶ ಬರಬಹುದೆಂದು ಹೇಳಲು ಈಗಲೇ ಸಾಧ್ಯವಿಲ್ಲವೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Gggggggggggg
  • Gg
  • Professional