ಮತದಾನದ ಹಿನ್ನೆಲೆಯಲ್ಲಿ ಕಡಿಮೆಯಾದ ಅಪರಾಧ ಪ್ರಕರಣಗಳು

Election

09-05-2018

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಸೇರಿ ರಾಜ್ಯದ ವಿವಿದೆಢೆಗಳಲ್ಲಿ ನಡೆಯುತ್ತಿರುವ ಕಳ್ಳತನ,ಸುಲಿಗೆ ಇನ್ನಿತರ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ.

ನಗರದ ಎಲ್ಲಾ ಠಾಣೆಗಳ ಪೊಲೀಸರು ಚುನಾವಣೆಯ ಭದ್ರತೆ ಮತದಾನದ ಸಿದ್ದತೆಯಲ್ಲಿ ತೊಡಗಿರುವುದರಿಂದ ಪತ್ತೆಕಾರ್ಯ ಕೂಡ ಕಡಿಮೆಯಾಗಿದೆ. ಚುನಾವಣಾ ಕೆಲಸ ಕಾರ್ಯಗಳ ಒತ್ತಡದಲ್ಲಿ ಪೊಲೀಸರು ಸಿಲುಕಿರುವುದರಿಂದ ಅಪರಾಧಗಳ ಕುರಿತು ಬರುವ ದೂರುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ.

ಚುನಾವಣಾಧಿಕಾರಿಗಳು ನಡೆಸುವ ಸಭೆಗಳು ಹಿರಿಯ ಪೊಲೀಸ್ ಅಧಿಕಾರಿಗಳು ಆಗಾಗ ಕರೆಯುತ್ತಿರುವ ಸಭೆಗಳಲ್ಲಿ ಇನ್ಸ್ಪೆಕ್ಟರ್‍ಗಳು,ಸಬ್‍ಇನ್ಸ್ಪೆಕ್ಟರ್‍ಗಳು ಭಾಗವಹಿಸಬೇಕಾಗಿರುವುದರಿಂದ ಅಪರಾಧಗಳ ಪತ್ತೆ ಕಾರ್ಯಕ್ಕೆ ತೊಡಕುಂಟಾಗಿದೆ.

ಸಣ್ಣ-ಪುಟ್ಟ ಅಪರಾಧ ನಡೆಸುವ ದುಷ್ಕರ್ಮಿಗಳಿಗೆ ಚುನಾವಣಾ ಪ್ರಚಾರದಲ್ಲಿ ಹಣ ಊಟ ಇನ್ನಿತರ ಸೌಲಭ್ಯಗಳು ದೊರೆಯುತ್ತಿದೆ. ಇದರಿಂದಾಗಿ  ಬಹುತೇಕ ಮಂದಿ ತಮ್ಮ ಸುಲಭವಾಗಿ ಹಣ ಗಳಿಸುವ ಚಾಳಿಯನ್ನು ಬಿಟ್ಟು ಚುನಾವಣಾ ಪ್ರಚಾರಗಳಿಗೆ ಹೋಗಿ ಶ್ರಮವಿಲ್ಲದೇ ಹಣ ಗಳಿಸುತ್ತಿದ್ದಾರೆ.ಹಾಗಾಗಿ ಸುಲಿಗೆ, ಪಿಟ್‍ಪಾಕೆಟ್,ಮನೆ ಕಳವು,ವಾಹನಕಳವು ಇನ್ನಿತರ ಅಪರಾಧ ಕೃತ್ಯಗಳು ಕಡಿಮೆಯಾಗಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ