ಅಮೃತಹಳ್ಳಿಯ ಕೃಷ್ಣ ಜ್ಯುವೆಲ್ಲರಿ ಅಂಗಡಿ ಮೇಲೆ ದಾಳಿ

Attack on Krishna jewellery shop

09-05-2018

ಬೆಂಗಳೂರು : ಯಾವುದೇ ದಾಖಲಾತಿಯಿಲ್ಲದೇ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಅಮೃತಹಳ್ಳಿಯ ಚಿನ್ನಾಭರಣ ಅಂಗಡಿಯೊಂದರಲ್ಲಿ ಎಣಿಸುತ್ತಿದ್ದ 32 ಲಕ್ಷ 50 ಸಾವಿರ ಹಣವನ್ನು  ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಅಮೃತಹಳ್ಳಿಯ ಕೃಷ್ಣ ಜ್ಯುವೆಲ್ಲರಿ ಅಂಗಡಿ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿರುವ ಚುನಾವಣಾಧಿಕಾರಿಗಳು ರಿಯಲ್ ಎಸ್ಟೇಟ್ ಉದ್ಯಮಿ ಚೆನ್ನಕೇಶವ್ ಎಣಿಸುತ್ತಿದ್ದ 32 ಲಕ್ಷ 50 ಸಾವಿರ ಹಣವನ್ನ ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಚೆನ್ನಕೇಶವ ಅವರು ನಾನು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದೆ ಅದರಲ್ಲಿ ಬಂದ ಹಣವನ್ನು ಮನೆಯಲ್ಲಿ ಎಣಿಸಲು ಯಂತ್ರವಿಲ್ಲದಿದ್ದರಿಂದ ಮನೆಗೆ ಬಂದು ಎಣಿಸುತ್ತಿದ್ದೇನೆ ಹಣದ  ಸೂಕ್ತ ದಾಖಲೆಗಳನ್ನು ನೀಡಲಿದ್ದೇನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ