ಮೈಸೂರು ರಾಜವಂಶಸ್ಥರಿಗೆ ಸೇರಿದ ಜಮೀನು ಗುಳುಂ

Mysore

09-05-2018

ಮೈಸೂರು ರಾಜವಂಶಸ್ಥರಿಗೆ ಸೇರಿದ ಜಮೀನು ಗುಳುಂ ಮಾಡಿ ಸಾಲ ಪಡೆದ ಆರೋಪದ ಹಿನ್ನೆಲೆಯಲ್ಲಿ ಮೇಲುಕೋಟೆ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ವಿರುದ್ದ  ಸಿಬಿಐಗೆ ದೂರು ನೀಡಲಾಗಿದೆ. ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ನಿಂದ ಸಾಲ ಪಡೆದ ಆರೋಪದಡಿಯಲ್ಲಿ ಅಕ್ರಮದ ದಾಖಲೆ ಸಮೇತ ಮಂಡ್ಯದ Rti ಕಾರ್ಯಕರ್ತ ರವೀಂದ್ರನಿಂದ ಸಿಬಿಐಗೆ ದೂರು ನೀಡಲಾಗಿದ್ದು, ಬೇಬಿ ಬೆಟ್ಟದ ಅಮೃತ್ ಮಹಲ್ ಕಾವಲ್ ಸರ್ವೇ ನಂ ೧ ಕ್ಕೆ ನಕಲಿ ದಾಖಲೆ ಸೃಷ್ಟಿಸಿ ಆಂಧ್ರಬ್ಯಾಂಕ್ ನಿಂದ ಅಕ್ರಮ ೧.೫ ಕೋಟಿ ಸಾಲ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೈಸೂರು ಮಹರಾಣಿಯವರಿಗೆ ಸೇರಿದ ಸರ್ಕಾರಿ ಜಾಗವನ್ನ ಅಧಿಕಾರಿಗಳು ಅನ್ಯಕ್ರಾಂತ ಮಂಜೂರು ಮಾಡಿ ಸಾಲ ಕೊಡಿಸಿರೋ ಆರೋಪದ ಹಿಂದೆ ಮಂಡ್ಯ ಡಿಸಿ, ಬ್ಯಾಂಕ್ ಅಧಿಕಾರಿಗಳು, ಪಂಚಾಯ್ತಿ‌ ಅಧಿಕಾರಿಗಳು ಷಾಮೀಲಾಗಿದ್ದಾರೆಂದು ಶಂಕಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮಂಡ್ಯ ಡಿ.ಸಿ ಜಿಯಾವುಲ್ಲಾ, ಪಿಡಿಒ , ಮತ್ತು ಆಂದ್ರ ಬ್ಯಾಂಕ್ ಮ್ಯಾನೇಜರ್,  ಸಂಸದ ಪುಟ್ಟರಾಜು ಸೇರಿ ಅವ್ರ ಕುಟುಂಬದವರ ವಿರುದ್ದ ರವಿಂದ್ರರವರು ದೂರು ಸಲ್ಲಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ