ನಾಪತ್ತೆಯಾಗಿದ್ದ ಬಾಲಕ ತಮಿಳುನಾಡಿನಲ್ಲಿ ಪತ್ತೆ

A missing boy was found in Tamil Nadu

08-05-2018

ಬೆಂಗಳೂರು: ನಗರದ ಮಹಾಲಕ್ಷಿಪುರದಿಂದ ನಾಪತ್ತೆಯಾಗಿದ್ದ ನಗರದ ಬಾಲಕ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾನೆ. ಕಳೆದ ಶುಕ್ರವಾರ ಮಹಾಲಕ್ಷಿಪುರ ನಿವಾಸಿ 15 ವರ್ಷದ ಎಸ್. ಕಾರ್ತಿಕ್ ನಾಪತ್ತೆಯಾಗಿದ್ದನು. ಆತಂಕಗೊಂಡ ಆತನ ಪೋಷಕರು ಪೊಲೀಸರಿಗೆ ದೂರು ನೀಡಿ ಹುಡುಕಾಡುತ್ತಿದ್ದರು. ಮೂರು ದಿನಗಳಾದರೂ ಕಾರ್ತಿಕ್ ಪತ್ತೆಯಾಗಿರಲಿಲ್ಲ. ಆದರೆ ಮಂಗಳವಾರ ತಮಿಳುನಾಡಿನಲ್ಲಿ ಬಾಲಕ ಪತ್ತೆಯಾಗಿದ್ದಾನೆ.

ಶುಕ್ರವಾರ ಕಾರ್ತಿಕ್ ಮನೆಯಿಂದ ಬೆಳಿಗ್ಗೆ ಸುಮಾರು 10.15 ಕ್ಕೆ ಆಟವಾಡಿಕೊಂಡು ಬರುವುದಾಗಿ ಮನೆಯಲ್ಲಿ ತಿಳಿಸಿ, ಹೊರಗೆ ಹೋದವನು ಹಿಂದಿರುಗಿ ಬಂದಿರಲಿಲ್ಲ. ಆದ್ದರಿಂದ ಕಾಣೆಯಾಗಿರುವ ನಮ್ಮ ಮಗನನ್ನ ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳೂತ್ತಿದ್ದೇವೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದರು. ಬಾಲಕ ಅಪ್ರಾಪ್ತನಾಗಿರುವುದರಿಂದ ಐಪಿಸಿ 363 ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ ಬಾಲಕನ ಬಗ್ಗೆ ಏನಾದರೂ ಮಾಹಿತಿ ತಿಳಿದರೆ ಮಹಾಲಕ್ಷಿಪುರ ಪೊಲೀಸ್ ಠಾಣೆಗೆ ಅಥವಾ ನಮಗೆ ಮಾಹಿತಿ ನೀಡಬೇಕೆಂದು ಪೋಷಕರು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

 

 

 


ಸಂಬಂಧಿತ ಟ್ಯಾಗ್ಗಳು

missing Tamil Nadu ನಾಪತ್ತೆ ಪೋಷಕರು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ