ಮೂವರು ಯುವಕರು ಸಮುದ್ರ ಪಾಲು

Three bangalorian boys died in velankanni

08-05-2018

ಬೆಂಗಳೂರು: ಸ್ನೇಹಿತನನ್ನು ಪ್ರೀತಿಸಿದ ಯುವತಿಯ ಜೊತೆ ವಿವಾಹ ಮಾಡಲು ತಮಿಳುನಾಡಿನ ವೇಲಾಂಗಣಿಗೆ ಹೋಗಿದ್ದ ನಗರದ ಕಾವಲ್‍ ಬೈರಸಂದ್ರದ ಮೂವರು ಯುವಕರು ಸಮುದ್ರದಲ್ಲಿ ಈಜಲು ಹೋಗಿ ಅಲೆಗೆ ಸಿಕ್ಕಿ ನೀರು ಪಾಲಾಗಿದ್ದಾರೆ. ಕಾವಲ್‍ಭೈರಸಂದ್ರದಿಂದ ಹೋಗಿದ್ದ ವಿಜಯ್(22), ಚಂದ್ರು(23) ಹಾಗೂ ಸಾಲಮನ್(22)ಸಮುದ್ರದಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದು ಇಂದು ಬೆಳಿಗ್ಗೆ ಮೃತದೇಹಗಳನ್ನು ತಂದು ಅಂತ್ಯಸಂಸ್ಕಾರ ನಡೆಸಲಾಯಿತು.

ಕಳೆದ ಗುರುವಾರ ವಿಜಯ್, ಚಂದ್ರು,ಹಾಗೂ ಸಾಲಮನ್ ಅವರು ಸ್ನೇಹಿತ ಮತ್ತವನ ಪ್ರೇಯಸಿಯನ್ನು ವಿವಾಹ ಮಾಡಲು ವೇಲಾಂಗಣಿಗೆ ಕರೆದುಕೊಂಡು ಹೋಗಿದ್ದರು.ಅಂದು ಅಲ್ಲೇ ಉಳಿದಿದ್ದ ಈ ಮೂವರು ಮರುದಿನ ಪಾರ್ಟಿ ಮಾಡಿ ಮದ್ಯ ಸೇವಿಸಿ ಸಮುದ್ರಕ್ಕೆ ಈಜಲು ಹೋಗಿದ್ದಾರೆ.

ಅಲೆಯ ಸೆಳೆತಕ್ಕೆ ಸಿಕ್ಕಿ ಕಾಣೆಯಾಗಿದ್ದ ಈ ಮೂವರ ಮೃತದೇಹಗಳು ಸೋಮವಾರ ರಾತ್ರಿ ಪತ್ತೆಯಾಗಿದ್ದವು ವಿವಾಹ ಮಾಡಿಕೊಳ್ಳಲು ಹೋದ ಯುವಕ ಯುವತಿ ಸುರಕ್ಷಿತವಾಗಿದ್ದಾರೆ. ವೇಲಾಂಗಣಿಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Friends marriage ಮೃತದೇಹ ಸಮುದ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ