ಯುವತಿ ವಿಚಾರವಾಗಿ ಸ್ನೇಹಿತನ ಕೊಲೆ

horrific murder: head separated

08-05-2018

ಬೆಂಗಳೂರು: ಯುವತಿಯ ಪ್ರೀತಿಸುವ ವಿಚಾರಕ್ಕೆ ಜಗಳವಾಗಿ ಸ್ನೇಹಿತನ ತಲೆ ಕತ್ತರಿಸಿ ಪರಾರಿಯಾಗಿದ್ದ ಮೂವರು ಸೇರಿ ನಾಲ್ವರು ಆರೋಪಿಗಳನ್ನು ಗಂಗಮ್ಮನಗುಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗಮ್ಮನಗುಡಿಯ ಪ್ರಸಾದ್ (24), ಮಹೇಶ್ (22), ಚಂದ್ರು (21), ಸಾಲಮನ್(21), ಬಂಧಿತ ಆರೋಪಿಗಳಾಗಿದ್ದಾರೆ, ಬಂಧಿತರಿಂದ ಮಚ್ಚುಮ, ಲಾಂಗ್‍ಗಳು ಕೃತ್ಯಕ್ಕೆ ಬಳಸಿದ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಕಳೆದ ಮೇ 3ರಂದು ರಾತ್ರಿ 10.30ರ ವೇಳೆ ರಾಮಚಂದ್ರಾಪುರ ಬಸ್ ನಿಲ್ದಾಣದ ಬಳಿ ಸ್ನೇಹಿತ ಡೇವಿಡ್‍ನನ್ನು ಪಾರ್ಟಿ ಮಾಡಲು ಕರೆತಂದು ಸಂಚು ರೂಪಿಸಿ ತಲೆ ಕತ್ತರಿಸಿ ಕೊಲೆಗೈದಿದ್ದ ಆರೋಪಿಗಳು ಕೃತ್ಯ ನಡೆದ ಸ್ಥಳದಿಂದ ಸುಮಾರು ನೂರು ಮೀಟರ್ ದೂರದಲ್ಲಿ ಡೇವಿಡ್‍ನ ರುಂಡವನ್ನು ಎಸೆದು ಪರಾರಿಯಾಗಿದ್ದರು

ಕೃತ್ಯವನ್ನು ಭೇದಿಸಲು ರಚಿಸಲಾಗಿದ್ದ ಎರಡು ವಿಶೇಷ ತಂಡಗಳು ಮೊದಲಿಗೆ ಆರೋಪಿ ಪ್ರಸಾದ್‍ನನ್ನು ಬಂಧಿಸಿ ಆತ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ಉಳಿದ ಮೂವರನ್ನು ಬಂಧಿಸಿ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನಿಬ್ಬರಿಗಾಗಿ ತೀವ್ರ ಶೋಧ ನಡೆಸಲಾಗಿದೆ.

ವಿದ್ಯಾರಣ್ಯಪುರದ ದೊಡ್ಡಬೊಮ್ಮಸಂದ್ರ ನಿವಾಸಿಯಾದ ಡೇವಿಡ್, 2006ರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ. ಈತನ ವಿರುದ್ಧ ಕಳ್ಳತನ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿದ್ದವು. ಒಂಬತ್ತು ತಿಂಗಳಿನಿಂದ ಎಚ್‍ಎಂಟಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು,ಆರೋಪಿಗಳ ಪೈಕಿ ಒಬ್ಬಾತ, ರಾಮಚಂದ್ರಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಡೇವಿಡ್ ಕೂಡ ಅದೇ ಯುವತಿಯ ಹಿಂದೆ ಬಿದ್ದಿದ್ದ. ಈ ವಿಚಾರಕ್ಕೆ ಪರಸ್ಪರರ ನಡುವೆ 20 ದಿನಗಳ ಹಿಂದೆ ಗಲಾಟೆಯಾಗಿತ್ತು. ಆಗ ಸ್ನೇಹಿತರೇ ಮಧ್ಯಪ್ರವೇಶಿಸಿ, ರಾಜಿ ಮಾಡಿಸಿದ್ದರು.

ಡೇವಿಡ್‍ನನ್ನು ಸುಮ್ಮನೆ ಬಿಟ್ಟರೆ ತನ್ನ ಪ್ರೀತಿ ಹಾಳಾಗುತ್ತದೆ ಎಂದು ಆರೋಪಿ ಆತನ ಹತ್ಯೆಗೆ ಮೇ 3ರಂದು ಸಂಚು ರೂಪಿಸಿ ಇತರ ಸ್ನೇಹಿತರ ಜೊತೆ ಸೇರಿ ಮಚ್ಚು ಲಾಂಗುಗಳೊಂದಿಗೆ ಆಟೊದಲ್ಲಿ ರಾಮಚಂದ್ರಾಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಡೇವಿಡ್‍ಗೆ ಕರೆ ಮಾಡಿದ ಆರೋಪಿ ಪ್ರಸಾದ್, `ಪಾರ್ಟಿ ಮಾಡೋಣ. ಬಸ್ ನಿಲ್ದಾಣದ ಬಳಿ ಬಾ' ಎಂದು ಹೇಳಿದ್ದ. ಅದರಂತೆ ಸ್ವಲ್ಪ ಸಮಯದಲ್ಲೇ ಆತ ಬೈಕ್‍ನಲ್ಲಿ ಸ್ಥಳಕ್ಕೆ ಬಂದಿದ್ದ. ಎರಡು ಆಟೊಗಳನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು, 10.30ರವರೆಗೆ ಪಾರ್ಟಿ ಮಾಡಿದ್ದರು. ಡೇವಿಡ್‍ಗೆ ಕಂಠಪೂರ್ತಿ ಕುಡಿಸಿದ ಆರೋಪಿಗಳು, ಆತ ಮನೆಗೆ ಹೊರಡುವುದಾಗಿ ಎದ್ದೇಳುತ್ತಿದ್ದಂತೆಯೇ ಮಚ್ಚುಲಾಂಗುಗಳಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.


ಸಂಬಂಧಿತ ಟ್ಯಾಗ್ಗಳು

Murder friends ನಿಲ್ದಾಣ ಕೃತ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ