ಗುತ್ತಿಗೆ ಪೌರ ಕಾರ್ಮಿಕ ಪದ್ದತಿ ರದ್ದು ಮಾಡದಿದ್ದರೆ ಬಂದ್ !

Kannada News

23-05-2017

ಬಳ್ಳಾರಿ:  ಜೂನ್ 12 ರೊಳಗೆ ಗುತ್ತಿಗೆ ಪೌರ ಕಾರ್ಮಿಕ ಪದ್ದತಿ ರದ್ದು ಮಾಡದಿದ್ದರೆ ನಗರ, ಪಟ್ಟಣ ಸ್ವಚ್ಚತೆ ಬಂದ್ ಮಾಡಿ ಮುಷ್ಕರ ನಡೆಸಲಾಗುವುದೆಂದು ಬಳ್ಳಾರಿಯ ಸಾಮಾನತೆ ಯೂನಿಯನ್ ಹೇಳಿದೆ. ಯೂನಿಯನ್ ರಾಜ್ಯ ಸಂಚಾಲಕ ರಾಮಚಂದ್ರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡುವುದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಗುತ್ತಿಗೆ ಪೌರ ಕಾರ್ಮಿಕನ್ನು ಕಡೆಗಣಿಸಿದೆ, ಕಾಯಂಮಾತಿಗೆ  ಅನೇಕ ಬಾರಿ ಪ್ರತಿಭಟನೆ ಮಾಡಿದಾಗ ಸ್ವತಃ ಮುಖ್ಯ ಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವರು ಭರವಸೆ ನೀಡಿದ್ದರು. ಆದರೆ ಈವರಗೆ ಗುತ್ತಿಗೆ ಪದ್ದತಿ ರದ್ದು ಮಾಡಿಲ್ಲ. ಗುತ್ತಿಗೆದಾರರಿಗೆ ನೀಡುವುದಕ್ಕಿಂತ ಒಂದು ಸಾವಿರ ವೇತನ ಕಡಿಮೆ ಕೊಡಲಿ ಆದರೆ ಖಾಯಂ ಮಾಡಿ ಎಂಬುದು ಕಾರ್ಮಿಕರ ಆಗ್ರಹವಾಗಿದೆ.ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿ 42 ಸಾವಿರ ಪೌರ ಕಾರ್ಮಿಕರು. ಕಸ ವಿಲೇವಾರಿ ವಾಹನ ಚಾಲಕರು ಮತ್ತು ಒಳಚರಂಡಿ ಸ್ವಚ್ಚತಾ ಕಾರ್ಮಿಕರು  ಗುತ್ತಿಗೆ ಆಧಾರಿತವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಸರ್ಕಾರದ ಕಾರ್ಯ ವೈಖರಿಗೆ ಬೇಸತ್ತು ಈ ತಿಂಗಳ 25 ರಂದು ಸರಕಾರಕ್ಕೆ ಎಚ್ಚರಿಸಲು ಪೊರಕೆ ಚಳುವಳಿ ನಡೆಸಲಿದ್ದೆವೆ ಎಂದು ಅವರು ತಿಳಿಸಿದರು. ಆನಂತರ 15 ದಿನದಲ್ಲಿ ಕಾಯಂ ಮಾಡಲು ಅಧಿಸೂಚನೆ ಹೊರಡಿಸದಿದ್ದರೆ ಜೂನ್ 12 ರಿಂದ ಸಂಪೂರ್ಣ ಕೆಲಸ ಸ್ಥಗಿತ ಮಾಡಿ ಮುಷ್ಕರ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ

 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ