‘184 ಅಭ್ಯರ್ಥಿಗಳ ಆಸ್ತಿಯಲ್ಲಿ ಶೇ 64ರಷ್ಟು ಹೆಚ್ಚಳ’08-05-2018

ಬೆಂಗಳೂರು: ರಾಜ್ಯ ವಿಧಾನಸಭೆಗೆ ಮತ್ತೊಮ್ಮೆ ಸ್ಪರ್ಧಿಸಿರುವ 184 ಅಭ್ಯರ್ಥಿಗಳ ಆಸ್ತಿಯಲ್ಲಿ ಶೇ 64 ರಷ್ಟು ಹೆಚ್ಚಳವಾಗಿದೆ. ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆ ಒಕ್ಕೂಟ ಈ ಕುರಿತು ಅಧ್ಯಯನ ನಡೆಸಿ ಈ ವರದಿ ಬಿಡುಗಡೆಮಾಡಿದೆ. ಕಳೆದ 2013ರಲ್ಲಿ ಅಭ್ಯರ್ಥಿಗಳು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರ ಹಾಗೂ ಶಾಸಕರಾಗಿ ಐದು ವರ್ಷ ಅಧಿಕಾರ ಅನುಭವಿಸಿದ ನಂತರ ಮತ್ತೊಮ್ಮೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಆಸ್ತಿ ವಿವರಗಳನ್ನು ಹೋಲಿಕೆ ಮಾಡಿದಾಗ ಈ ಅಂಶ ಪತ್ತೆಯಾಗಿದೆ.

2013ರಲ್ಲಿ ಈ ಶಾಸಕರ ಸರಾಸರಿ ಆಸ್ತಿ 26.92 ಕೋಟಿ ರೂಪಾಯಿ ಇತ್ತು. ಇದು 2018ರಲ್ಲಿ 44.24 ಕೋಟಿ ರೂ. ಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಶಾಸಕರ ಆಸ್ತಿಯಲ್ಲಿ 17.31 ಕೋಟಿ ರೂಪಾಯಿ ಏರಿಕೆ ಕಂಡು ಬಂದಿದೆ ಎಂದು ವರದಿ ತಿಳಿಸಿದೆ.

ವಿಧಾನಸಭಾ 224 ಕ್ಷೇತ್ರಗಳಿಗೆ ಕಣದಲ್ಲಿರುವ ಒಟ್ಟು 2560 ಅಭ್ಯರ್ಥಿಗಳ ಪೈಕಿ 391 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕ್ಕದಮೆಗಳಿವೆ.  391 ಅಭ್ಯರ್ಥಿಗಳ  ಪೈಕಿ 254 (ಶೇ. 10) ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣ, 4 ಅಭ್ಯರ್ಥಿಗಳ ವಿರುದ್ಧ ಕೊಲೆಗೆ ಸಂಬಂಧಿಸಿದ ಪ್ರಕರಣ, 25 ಅಭ್ಯರ್ಥಿಗಳ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆಯಂತೆ. ಕ್ರಿಮಿನಲ್ ಪ್ರಕರಣಗಳಲ್ಲಿ ಬಿಜೆಪಿಯಲ್ಲಿ 83, ಕಾಂಗ್ರೆಸ್ 59, ಜೆಡಿಎಸ್ 41, ಸಂಯುಕ್ತ ಜನತಾ ದಳದ 25 ಅಭ್ಯರ್ಥಿಗಳಲ್ಲಿ 5, ಆಪ್ ಪಕ್ಷದ 27 ಅಭ್ಯರ್ಥಿಗಳಲ್ಲಿ 5, 1090 ಪಕ್ಷೇತರ ಅಭ್ಯರ್ಥಿಗಳಲ್ಲಿ 108 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಇವೆ ಎಂದು ವರದಿ ಹೇಳಿದೆ.

ಇದರ ಜತೆಗೆ ಬಿಜೆಪಿಯ 58, ಕಾಂಗ್ರೆಸ್‍ನ 32, ಜೆಡಿಎಸ್‍ನ 29, ಸಂಯುಕ್ತ ಜನತಾದಳದ 3, ಆಪ್ ಪಕ್ಷದ 27 ಅಭ್ಯರ್ಥಿಗಳಲ್ಲಿ ಒಬ್ಬರು, 1090 ಪಕ್ಷೇತರ ಅಭ್ಯರ್ಥಿಗಳಲ್ಲಿ 70 ಅಭ್ಯರ್ಥಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

candidates election ಕ್ರಿಮಿನಲ್ ಎಲೆಕ್ಷನ್ ವಾಚ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ