ವರ್ತೂರು ಪ್ರಕಾಶ್ ಗೆ ಹೆಚ್.ಎಂ.ರೇವಣ್ಣ ಎಚ್ಚರಿಕೆ!

varthur prakash v/s H.M.Revanna

08-05-2018

ಚಿಕ್ಕಬಳ್ಳಾಪುರ: ವರ್ತೂರು ಪ್ರಕಾಶ್ಗೆ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಶಾಸಕ ಸುಧಾಕರ್ ಪರ ಪ್ರಚಾರ ನಡೆಸುತ್ತಿರುವ ಹೆಚ್.ಎಂ.ರೇವಣ್ಣ, ಕುರುಬ ಸಮುದಾಯವನ್ನು ದತ್ತು ಪಡೆದಂತೆ ವರ್ತೂರು ಪ್ರಕಾಶ್ ಮಾತನಾಡುವುದು ಸರಿಯಲ್ಲ. ಸಿಎಂ ಸಿದ್ದರಾಮಯ್ಯ ವಿರುದ್ಧ ಲಘುವಾಗಿ ಮಾತನಾಡಿರುವುದೂ ಸರಿಯಲ್ಲ ಎಂದಿದ್ದಾರೆ. ಕೋಲಾರದಲ್ಲೇ ಕನಕ‌ ಭವನ ನಿರ್ಮಿಸಿಲ್ಲ. ಸಮಾಜದ ಕೆಲಸ ಏನು ಮಾಡುತ್ತಾನೆ? ಎಂದು ಪ್ರಶ್ನಿಸಿದ್ದಾರೆ. ವರ್ತೂರು ಪ್ರಕಾಶ್ ಸ್ವಯಂಘೋಷಿತ ಕುರುಬ ಸಮುದಾಯದ ನಾಯಕ. ಮುಂದೆ ಈ ರೀತಿ ಮಾತನಾಡಿದರೆ ಎಲ್ಲೂ ಓಡಾಡಕ್ಕೆ ಬಿಡಲ್ಲ ಎಂದು ಎಚ್ಚರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯಿಂದ ಸಿಬಿಐ, ಇಡಿ, ಐಟಿ‌ ಇಲಾಖೆಗಳ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಹಿನ್ನೆಲೆ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿಸಲಾಗುತ್ತಿದೆ. ಬಿಜೆಪಿಯವರು ಬಿಪಿಎಲ್ ಕಾರ್ಡ್ ನವರಾ? ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಗೆಲ್ಲಲ್ಲ ಅಂತ ತಿಳಿದು ಈ ರೀತಿಯ ದಾಳಿ ನಡೆಸಲಾಗುತ್ತಿದೆ. ಕರ್ನಾಟಕದ ಜನ ಈ ಬಗ್ಗೆ ತೀರ್ಮಾನ‌ ಮಾಡಿ‌ ಬುದ್ಧಿ ಕಲಿಸಲಿದ್ದಾರೆ ಎಂದರು. ಚನ್ನಪಟ್ಟಣದಲ್ಲಿ ನನಗೆ ಗೆಲುವಿನ ಹಾದಿ ಸುಗುಮ ಎಂದ ಹೆಚ್.ಎಂ.ರೇವಣ್ಣ. ಯೋಗೇಶ್ವರ್ ಒಂದೊಂದು ಬಾರಿ ಒಂದೊಂದು ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದಾರೆ, ಇದು‌ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಎರಡು ಕಡೆ ಸ್ಪರ್ದೆ ಮಾಡಿರುವುದು ನನಗೆ ಲಾಭ. ಇದು ನನ್ನ ಗೆಲುವಿಗೆ ಸುಗುಮವಾದ ಹಾದಿ ಎಂದರು.


ಸಂಬಂಧಿತ ಟ್ಯಾಗ್ಗಳು

H.M.revanna varthur prakash ಆಕ್ರೋಶ ಸ್ವಯಂಘೋಷಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ